ಬಿಡಿಎ ಜಾಗೃತ ದಳದಿಂದ ದಾಳಿ: ಅಕ್ರಮವಾಗಿ ತಯಾರಿಸಿದ್ಧ ದಾಖಲೆಗಳು ವಶ: ಆರೋಪಿ ಬಂಧನ…

ಬೆಂಗಳೂರು,ಡಿಸೆಂಬರ್,4,2020(www.justkannada.in): ಪ್ರಾಧಿಕಾರದ ಸ್ವತ್ತುಗಳಾದ ಹಂಚಿಕೆ ಪತ್ರ, ಸ್ವಾಧೀನ ಪತ್ರ, ಖಚಿತ ಅಳತೆ ವರದಿ ಇತರೆ ದಾಖಲೆಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳೊಂದಿಗೆ ಬಿಡಿಎ ಸಿಬ್ಬಂದಿಗಳು ಶಾಮೀಲಾಗಿ ಖಾಸಗಿ ಕಚೇರಿಯೊಂದರಲ್ಲಿ ತಯಾರಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು.logo-justkannada-mysore

ಈ ಮಾಹಿತಿಯನ್ವಯ ಬಿಡಿಎ ಜಾಗೃತ ದಳಕ್ಕೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿತ್ತು. ಜಾಗೃತದಳದ ಪೊಲೀಸರು ಕಳೆದ 15 ದಿನಗಳಿಂದ ಗೋಪ್ಯವಾಗಿ ತನಿಖೆ ಕೈಗೊಂಡಿದ್ದರು. ಇದೀಗ ಇಂದು ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ಬಿಡಿಎ ಜಾಗೃತ ದಳ  ಕನ್ನಿಂಗ್‌ ಹ್ಯಾಂ ರಸ್ತೆಯ ಪ್ರೆಸ್ಟೀಜ್ ಸೆಂಟರ್ ಪಾಯಿಂಟ್‌ನಲ್ಲಿರುವ Redhan the cinema people ಎಂಬ ಕಚೇರಿಯ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆ ಪತ್ರಗಳು, ಬಿಡಿಎ ಹೆಸರಿನ ಲೆಟರ್‌ಹೆಡ್‌ಗಳು, ಮೊಹರುಗಳು, ಹಂಚಿಕೆ ಪತ್ರಗಳು, ಸ್ವಾಧೀನ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಪ್ರಮುಖ ಆರೋಪಿ ಇಂದ್ರಕುಮಾರ್ ಎಂಬುವವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.attack-bda-vigilante-illegal-documents-seized-arrest-accused

ಹಾಗೆಯೇ ಇದರಲ್ಲಿ ಪ್ರಾಧಿಕಾರದ ಸಿಬ್ಬಂದಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಈ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.

Key words: Attack – BDA- vigilante- Illegal documents –seized-arrest – accused.