ಬೆಂಗಳೂರು,ಜೂ,12,2020(www.justkannada.in): ಅಗಸ್ಟ್ 15ರ ವೇಳೆಗೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ ವಾಗಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮಾಧ್ಯಮಗಳ ಜತೆ ಇಂದು ಮಾತನಾಡದಿದ ಸಚಿವ ಡಾ.ಕೆ. ಸುಧಾಕರ್, ಅಗಸ್ಟ್ 15ರ ವೇಳೆಗೆ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು. ಈ ಬಗ್ಗೆ ತಜ್ಞರು ಒಂದು ವರದಿ ಕೊಟ್ಟಿದ್ದಾರೆ. ಶೇ.95 ರಷ್ಟು ಮಂದಿ ಸೋಂಕಿತರಿಗೆ ರೋಗದ ಲಕ್ಷಣ ಇಲ್ಲ. ಇನ್ನು 6 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದರೇ ಆತಂಕ ಎದುರಾಗಲಿದೆ. ಆದರೆ ಅಗಸ್ಟ್ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ 1 ಲಕ್ಷ ದಾಟಲ್ಲ ಎಂಬ ವಿಶ್ವಾಸವಿದೆ. ಸರ್ಕಾರ ಕೊರೋನಾ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. 1ಲಕ್ಷ ಬೆಡ್ ಗಳನ್ನ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
1.83 ಲಕ್ಷ ಜನರಿಗೆ ಆನ್ ಲೈನ್ ನಲ್ಲಿ ಕೋವಿಡ್ ಬಗ್ಗೆ ತರಬೇತಿ ನೀಡಿದ್ದೇವೆ. ರಾಜೀವ್ ಗಾಂಧಿ ವಿವಿ ಅಡಿಯಲ್ಲಿ ಆನ್ ಲೈನ್ ತರಬೇತಿ ನೀಡಿದ್ದೇವೆ. ಸೋಂಕಿಗೆ ಇನ್ನೂ ಸೂಕ್ತ ಔಷಧ ಲಭ್ಯವಾಗಿಲ್ಲ. ಆಗಸ್ಟ್ ವೇಳೆಗೆ ಶೇ.20 ರಷ್ಟು ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ. ಸೇರೋಲಾಜಿಕಲ್ ಸರ್ವೆ ಪ್ರಕಾರ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಖಾಸಗಿಯವರು ಸರ್ಕಾರಿಯವರು ಎಲ್ಲರೂ ಸೇರಿ ಕೆಲಸ ಮಾಡಬೇಕು. ಜನರು ಸರ್ಕಾರದ ಮಾರ್ಗಸೂಚಿಸಿ ಪಾಲಿಸಬೇಕು ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.
Key words: August 15- number – coronavirus- infections – increase – Minister -Dr.K. sudhakar