ಅಡಿಲೇಡ್, ನವೆಂಬರ್ 30, 2019 (www.justkannada.in): ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 73 ವರ್ಷದ ಹಿಂದಿನ ದಾಖಲೆ ಮುರಿದ ಸಾಧನೆ ಮಾಡಿದ್ದಾರೆ.
ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಅತ್ಯಂತ ವೇಗವಾಗಿ 7000 ರನ್ ಪೂರೈಸಿದರು. ಈ ಮೂಲಕ 73 ವರ್ಷಗಳ ಹಿಂದಿನ ದಾಖಲೆ ಮುರಿದರು.
ಸ್ಮಿತ್ 126 ಇನಿಂಗ್ಸ್ ನಲ್ಲಿ 7000 ರನ್ ಪೂರೈಸುವ ಮೂಲಕ ಇಂಗ್ಲೆಂಡ್ ನ ವ್ಯಾಲಿ ಹ್ಯಾಮಂಡ್ 135 ಇನಿಂಗ್ಸ್ ನಲ್ಲಿ ಮಾಡಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.1946ರಲ್ಲಿ ಹ್ಯಾಮಂಡ್ಸ್ ಈ ಸಾಧನೆ ಮಾಡಿದ್ದರು.
ಭಾರತದ ವೀರೇಂದ್ರ ಸೆಹ್ವಾಗ್ 132 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಸಚಿನ್ ತೆಂಡೂಲ್ಕರ್ 134 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಆಕ್ರಮಿಸಿಕೊಂಡಿದ್ದಾರೆ.