ಬೆಂಗಳೂರು, ಜನವರಿ 07, 2022 (www.justkannada.in): ಟೆನಿಸ್ ತಾರೆ, ವಿಶ್ವ ನಂ. 1 ಆಟಗಾರ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ಗೆ ಆಸ್ಟ್ರೇಲಿಯಾ ದೇಶಕ್ಕೆ ಪ್ರವೇಶ ನಿರಾಕರಿಸಲಾಗಿದೆ.
ಹೌದು, ಕರೊನಾ ಲಸಿಕೆಯಿಂದ ವಿನಾಯಿತಿ ಪಡೆದ ಜೋಶ್ನಲ್ಲಿ ಆಸ್ಟ್ರೇಲಿಯನ್ ಓಪನ್ ಆಡಲು ತೆರಳಿದ ವಿಶ್ವ ನಂ. 1 ಆಟಗಾರ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ಗೆ ಆಸ್ಟ್ರೇಲಿಯಾ ದೇಶಕ್ಕೆ ಪ್ರವೇಶ ನಿರಾಕರಿಸಲಾಗಿದೆ.
ಜೋಕೊವಿಕ್ಗೆ ನೀಡಲಾಗಿದ್ದ ವೀಸಾವನ್ನೂ ರದ್ದುಗೊಳಿಸಲಾಗಿದ್ದು, ಈ ವರ್ಷ ಅವರು 10ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಕನಸು ಕೂಡ ಬಹುತೇಕ ಭಗ್ನಗೊಂಡಿದೆ.
ಆಸ್ಟ್ರೇಲಿಯನ್ ಓಪನ್ನಲ್ಲಿ ಭಾಗವಹಿಸುವ ಎಲ್ಲ ಆಟಗಾರರಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದ್ದರೂ, ವೈದ್ಯಕೀಯ ಕಾರಣಗಳಿಂದಾಗಿ ತನಗೆ ವಿನಾಯಿತಿ ನೀಡಲಾಗಿದೆ ಎಂದು 20 ಗ್ರಾಂಡ್ ಸ್ಲಾಂಗಳ ಒಡೆಯ ಜೋಕೋ ಸೆರ್ಬಿಯಾದಿಂದ ಆಸೀಸ್ಗೆ ಪ್ರಯಾಣಿಸುವ ಮುನ್ನ ಪ್ರಕಟಿಸಿದ್ದರು.
ವಿಕ್ಟೋರಿಯಾ ರಾಜ್ಯ ಸರ್ಕಾರ ನೀಡಿದ ಲಸಿಕೆ ವಿನಾಯಿತಿಯನ್ನು ನಿಯಮಬದ್ಧವಾಗಿಲ್ಲ ಎಂದು ಆಸ್ಟ್ರೇಲಿಯನ್ ಬಾರ್ಡರ್ ಫೋರ್ಸ್ ತಳ್ಳಿಹಾಕಿದೆ.