ಬೆಂಗಳೂರು, ಆಗಸ್ಟ್ 1, 2021 (www.justkannada.in): ಒಂದೇ ಒಲಿಂಪಿಕ್ಸ್ನಲ್ಲಿ ಏಳು ಪದಕ ಗೆದ್ದ ಮೊದಲ ಮಹಿಳಾ ಈಜುಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ ಆಸ್ಟ್ರೇಲಿಯಾದ ಎಮ್ಮಾ ಮೆಕೋಯ್ನ್.
ಮಹಿಳೆಯರ 100 ಮೀ. ಫ್ರೀಸ್ಟೈಲ್, 4×100 ಮೀ. ಫ್ರೀಸ್ಟೈಲ್ ರಿಲೇ, 4×100 ಮೀ. ಮೆಡ್ಲೆ ರಿಲೇ ಮತ್ತು 50 ಮೀ. ಫ್ರೀಸ್ಟೈಲ್ ನಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ 100 ಮೀಟರ್ ಬಟರ್ ಫ್ಲೈ ವಿಭಾಗ, 4×200 ಮೀ. ಫ್ರೀಸ್ಟೈಲ್ ರಿಲೇ ಮತ್ತು ಮಿಶ್ರ 4×100 ಮೀ. ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆಗೆ ಪಾತ್ರರಾಗಿದ್ದಾರೆ.