ಬೆಂಗಳೂರು,ಜುಲೈ,31,2023(www.justkannada.in): ಆಟೋ ಚಾಲಕರ ಜೊತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡೆಸಿದ ಸಭೆ ಅಂತ್ಯವಾಗಿದ್ದು ಸಚಿವರ ಮುಂದೆ ಆಟೋಚಾಲಕರು ಹಲವು ಬೇಡಿಕೆಗಳನ್ನಿಟ್ಟಿದ್ದಾರೆ.
ಈ ಕುರಿತು ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಓಲಾ, ಉಬರ್ನಿಂದ ಸಮಸ್ಯೆಯಾಗುತ್ತಿದೆ ಅಂತಾ ಆಟೋ ಚಾಲಕರು ತಿಳಿಸಿದ್ದಾರೆ. ಆದರೆ ರ್ಯಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು ತಿಳಿಸಿದರು.
ಹಾಗೆಯೇ ವಿಮೆ ಮಾಡಿಸಬೇಕು. ಚಾಲಕರ ದಿನಾಚರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಕಾನೂನುಬಾಹಿರ ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಕೋರಿದ್ದಾರೆ, ಏರ್ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಓಪನ್ಗೆ ಬೇಡಿಕೆ ಇದೆ. ಜಾಗ ಕೊಟ್ಟರೆ ಕೂಡಲೇ ಇಂದಿರಾ ಕ್ಯಾಂಟೀನ್ ಓಪನ್ ಮಾಡುತ್ತೇವೆ. ಖಾಸಗಿ ಬಸ್ಗಳ ಚಾಲಕರು ಕೂಡ ಸಮಸ್ಯೆ ಹೇಳಿಕೊಂಡಿದ್ದಾರೆ. ವಾಹನಗಳ ಮೇಲೆ ಬ್ಲಾಕ್ ಲಿಸ್ಟ್ ತೆಗೆಯಲು ಅದಾಲತ್ ಮಾಡುತ್ತೇವೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
Key words: Auto drivers – many -demands – Transport Minister -Ramalingareddy.