ಮೈಸೂರು,ಆಗಸ್ಟ್,8,2021(www.justkannada.in): ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು ರಾಜ್ಯಾದ್ಯಂತ ನೈಟ್ ಕರ್ಫ್ಯೂ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.
ಆದರೆ ವೀಕೆಂಡ್ ಕರ್ಪ್ಯೂಗೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕ್ರಮದ ವಿರುದ್ಧ ಅಸಂಘಟಿತ ಕಾರ್ಮಿಕ ವಲಯದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಡೋದಿದ್ರೆ ಸಂಪೂರ್ಣ ಲಾಕ್ ಡೌನ್ ಮಾಡಿ. ಬಡವರ ಹೊಟ್ಟೆ ಮೇಲೆ ಹೊಡಿಬೇಡಿ. ನಿಮ್ಮ ಅವೈಜ್ಞಾನಿಕ ತೀರ್ಮಾನದಿಂದ ಬಡ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಅರ್ಭಂಬರ್ಧ ಲಾಕ್ ಡೌನ್ ಮಾಡಿದ್ರೆ ಏನು ಪ್ರಯೋಜನ ಎಂದು ಆಟೋ ಚಾಲಕರು ಪ್ರಶ್ನಿಸಿದ್ದಾರೆ.
ಬಸ್ ಗಳನ್ನಾದ್ರೂ ನಿಲ್ಲಿಸಿದ್ರೆ ಆಟೋದವರಿಗೆ ಒಂದಷ್ಟು ಬಾಡಿಗೆ ಸಿಕ್ತಾ ಇತ್ತು. ಬಸ್ ಗಳನ್ನು ಬಿಟ್ಟು ಕರ್ಪ್ಯೂ ಅಂದ್ರೆ ಏನ್ ಅರ್ಥ. ಇಬ್ಬರು ಪ್ರಯಾಣಿಕರಿಗೆ ಬಸ್ ಓಡಿಸುತ್ತಾರೆ. ಇದರಿಂದ ಸರ್ಕಾರಕ್ಕೆ ನಷ್ಟು ಆಗೋದು. ಆ ನಷ್ಟವನ್ನು ಜನರ ಮೇಲೆ ಹಾಕ್ತಾರೆ ಎಂದು ಸರ್ಕಾರ ನಡೆ ವಿರುದ್ಧ ಆಟೋಚಾಲಕರು ಕಿಡಿಕಾರಿದ್ದಾರೆ.
ENGLISH SUMMARY….
Auto drivers oppose weekend curfew: Express ire against State Govt.
Mysuru, August 8, 2021 (www.justkannada.in): The State Government has imposed night curfew across the state and weekend curfew in eight border districts of the state, following an increase in the number of Coronavirus cases in the neighbouring Kerala and Maharashtra States.
Autorickshaw drivers, including unorganized labourers in Mysuru, have expressed their displeasure against the government for imposing a weekend curfew. “Let the government impose complete lockdown if it wants. Let it stop attacking the poor. The unscientific decisions of the government are creating a lot of problems for auto drivers. What is the use of imposing incomplete lockdown,” they have questioned.
They also said that if the government would stop running government buses at least it would help them. “What is the use of imposing curfew while plying buses. Buses on several routes are being run with only 2-3 passengers. Is not a loss for the government. They will also pass on that loss on the citizens,” they expressed their ire.
Keywords: Mysuru/ Auto drivers/ ire / state government/ weekend curfew
Key words: Auto drivers- opposition – Weekend curfew-Outrage -against -government.