ಜನತೆಗೆ ಮತ್ತೊಂದು ಶಾಕ್:  ಶೀಘ್ರದಲ್ಲೇ ‘ಆಟೋ ಮೀಟರ್ ದರ’ ಹೆಚ್ಚಳ ಸಾಧ್ಯತೆ

ಬೆಂಗಳೂರು,ಮಾರ್ಚ್,5,2025 (www.justkannada.in): ಬಿಎಂಟಿಸಿ ಬಸ್ ನಮ್ಮ ಮೆಟ್ರೋ ಪ್ರಯಾಣದ ದರ ಹೆಚ್ಚಳ ಬೆನ್ನಲ್ಲೆ ಬೆಂಗಳೂರಿನ ಜನತೆಗೆ ಮತ್ತೊಂದು ದರ ಏರಿಕೆಯ ಶಾಕ್ ಕಾದಿದೆ.

ಹೌದು ಶೀಘ್ರವೇ ಆಟೋ ಮೀಟರ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಸಂಬಂಧ ಮಾರ್ಚ್ 12ರಂದು ಬೆಂಗಳೂರಿನ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಆಟೋ ಮೀಟರ್ ದರ ಹೆಚ್ಚಳದ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಆಟೋ ಮೀಟರ್ ದರ ಎಷ್ಟು ಹೆಚ್ಚಳ ಮಾಡಬೇಕು ಎನ್ನುವ ಬಗ್ಗೆ ಸಂಘಟನೆಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮಾರ್ಚ್12ರ ಸಭೆಯ ನಂತರ ಬೆಂಗಳೂರಲ್ಲಿ ಆಟೋ ಮೀಟರ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಮೂಲಕ ಬೆಂಗಳೂರು ಜನತೆಗೆ ಮಾರ್ಚ್ ಎರಡನೇ ವಾರದಲ್ಲಿ ಆಟೋ ಮೀಟರ್ ದರ ಏರಿಕೆ ಫಿಕ್ಸ್ ಆಗುವ ಸಾಧ್ಯತೆ ಇದೆ.

Key words: Soon, Auto, Meter rate, increase