ಮೈಸೂರು,ಫೆಬ್ರವರಿ,1,2022(www.justkannada.in): ಪೆಟ್ರೋಲ್ ಹಾಗೂ ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆ ಹಿನ್ನಲೆ ಆಟೋ ಬಾಡಿಗೆ ದರ ಹೆಚ್ಚಿಸುವಂತೆ ಆಟೋ ಚಾಲಕರು ಸಲ್ಲಿಸಿದ್ದ ಮನವಿಗೆ ಮೈಸೂರು ಜಿಲ್ಲಾಡಳಿತ ಸ್ಪಂದಿಸಿದ್ದು ದರ ಪರಿಷ್ಕರಿಸಿದೆ.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದಿನಿಂದ ಆಟೋ ಬಾಡಿಗೆ ದರ ಹೆಚ್ಚಳವಾಗಲಿದೆ. ಕನಿಷ್ಠ 2 ಕಿ.ಮೀಗೆ 30 ರೂ. ನಂತರ ಪ್ರತಿ ಕಿಮೀಗೆ 15 ರೂ. ದರ ನಿಗದಿ ಮಾಡಲಾಗಿದೆ. ಹಾಗೆಯೇ ಮೊದಲ 5 ನಿಮಿಷ ಕಾಯಲು ಫ್ರೀ, ನಂತರದ ಪ್ರತೀ 15ನಿಮಿಷಕ್ಕೆ 5 ರೂ. ದರ, 20 ಕೆಜಿ ವರೆಗಿನ ಲಗೇಜ್ ಗೆ ಉಚಿತ. ನಂತರದ 20 ಕೆಜಿಗೆ 5 ರೂ. ದರ ನಿಗದಿಗೊಳಿಸಲಾಗಿದೆ. ರಾತ್ರಿ 10 ಗಂಟೆ ಬಳಿಕ ಸಾಮಾನ್ಯದರದೊಂದಿಗೆ ಅರ್ಧ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ.
ಇನ್ನು ದರ ಪರಿಷ್ಕರಣೆ ಕುರಿತು ಆಟೋ ಚಾಲಕರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಡಿಸಿ ಅನುಮತಿ ಬಳಿಕ ಆಟೋ ದರ ಪರಿಷ್ಕರಿಣೆ ಮಾಡಲಾಗಿದೆ.
Key words: Auto –rental- rate –hike-Mysore
ENGLISH SUMMARY…
Auto fares increased from today in Mysuru
Mysuru, February 1, 2022 (www.justkannada.in): The Mysuru District administration has approved an appeal made by the autorickshaw drivers association to increase the auto fares following increase in the prices of petrol and LPG.
Accordingly, the auto fares in Mysuru have increased from today. The minimum charges for 2 km will be Rs.30 and Rs. 15 per km after that. The waiting charges for the 15 minutes duration after 5 minutes will be Rs.5. Luggage up to 20 kgs will be free. Above 20 kg Rs. 5 per kg will be charged. The auto fares after 10.00 pm will be one-and-a-half on the actual fare.
Keywords: Mysuru/ Auto fares/ increased