ಬೆಂಗಳೂರು, ಡಿಸೆಂಬರ್ 27, 2019 (www.justkannada.in): ಶರಣ್ ನಟನೆಯ ”ಅವತಾರ ಪುರುಷ” ಚಿತ್ರದ ಟೀಸರ್ ರಿಲೀಸ್ ಪೋಸ್ಟ್ ಪೋನ್ ಆಗಿದೆ. ಯಾಕೆ ಗೊತ್ತಾ..?
ಈ ಸುದ್ದಿಯನ್ನ ನಿರ್ದೇಶಕ ಸಿಂಪಲ್ ಸುನಿ ಟ್ವಿಟರ್ ಮೂಲಕ ತಿಳಿಸಿದ್ದಾರೆ . ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರಿಮನ್ನಾರಾಯಣ ಚಿತ್ರ ಇಂದು ರಿಲೀಸ್ ಆಗ್ತಿದ್ದು , ನಿನ್ನೆ ಸೆಲೆಬ್ರಿಟಿ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ . ಚಿತ್ರತಂಡದ ಪ್ಲಾನ್ ಪ್ರಕಾರ ಈ ಚಿತ್ರದ ನಡುವೆಯೇ ಅವತಾರ ಪುರುಷ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ ಅದೀಗ ಮುಂದೂಡಿಕೆಯಾಗಿದೆ.
ಅನಿವಾಸಿ ಭಾರತೀಯಳಾಗಿ ಆಶಿಕಾ ರಂಗನಾಥ್ ಶರಣ್ ಗೆ ಜೋಡಿಯಾಗಿದ್ದಾರೆ . ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾ ಏಪ್ರಿಲ್’ನಲ್ಲಿ ಚಿತ್ರ ತೆರೆಗೆ ಬರೋ ಸಾಧ್ಯತೆಯಿದೆ.