ಬೆಂಗಳೂರು,ಅಕ್ಟೋಬರ್,2,2020(www.justkannada.in) ಗಾಂಧಿ ಜಯಂತಿ ಸ್ಮರಣೆಯ ಅಂಗವಾಗಿ ಪಾಲಿಕೆ ಸಹಯೋಗದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಆಯೋಜಿಸಿದ್ದ ವಿಧಾನಸೌಧದಿಂದ ಮಹಾತ್ಮಗಾಂಧಿ ರಸ್ತೆ ಕಬ್ಬನ್ ಪಾರ್ಕ್ ವರೆಗಿನ ಶಾಂತಿಗಾಗಿ ಸೈಕಲ್ ಜಾಥಾಕ್ಕೆ ಇಂದು ಚಾಲನೆ ನೀಡಲಾಯಿತು.
ಪರಿಸರ ಸ್ನೇಹಿ ಸಂಚಾರ ಮತ್ತು ಸುರಕ್ಷತೆಗಾಗಿ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ನಡೆಯಿತು. ಪಾಲಿಕೆ, ಬೆಂಗಳೂರು ಸ್ಮಾರ್ಟ್ ಸಿಟಿ ಮತ್ತು ಡಲ್ಟ್ ಸಹಯೋಗದಲ್ಲಿ ಮುಂಬರುವ ನವೆಂಬರ್ 1, 2020 ರ ವೇಳೆಗೆ 5 ಕಿಮಿ ಸೈಕಲ್ ಪಥ ನಿರ್ಮಾಣವಾಗಲಿದೆ. ಈ ವರ್ಷಾಂತ್ಯಕ್ಕೆ ಸೈಕಲ್ ಪಥವನ್ನು 25ಕಿಮಿ ವರೆಗೆ ವಿಸ್ತರಿಸುವ ಯೋಜನೆಯಿದೆ.
ಸೈಕಲ್ ಬಳಕೆಯ ಮೂಲಕ ಕಸಮುಕ್ತ ರಸ್ತೆ, ಸಾರ್ವಜನಿಕ ಸ್ಥಳಗಳ ಸ್ವಚ್ಚತೆ, ಶಾಂತಿ-ಸೌಹಾರ್ಧ ಜಾಗೃತಿ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದು ಸೈಕಲ್ ಜಾಥಾ ಉದ್ದೇಶವಾಗಿದೆ.
ಈ ವೇಳೆ ವಿಶೇಷ ಆಯುಕ್ತರುಗಳಾದ ಜೆ.ಮಂಜುನಾಥ್, ರಂದೀಪ್ ಡಿ, ಹೆಪ್ಸಿಬಾ ರಾಣಿ ಕೊರ್ಲಪಾಟಿ, ಹಿರಿಯ ಐಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ ಸೇರಿದಂತೆ ಇತರರು ಭಾಗವಹಿಸಿದ್ದರು.
summary…
On Gandhi Jayanthi, Bengaluru has taken a commendable step to promote sustainable cities with the promotion of India Cycles for Change campaign.
A 5 km cycling track is being readied by Bengaluru Smart City along with BBMP & DULT by Nov 1. This will be expanded to 25 km by 2020-end.
The cycle ride today emphasised on non-violence, garbage-free roads, keeping public spaces clean, creating a more liveable Namma Bengaluru & promoting non-motorized transport.
Key words: Awareness – traffic –safety-Cycle Jatha -Bangalore.BBMP