ನವದೆಹಲಿ, ಡಿಸೆಂಬರ್ 12, 2019 (www.justkannada.in): ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ನೀಡಿರುವ ತೀರ್ಪು ಮರುಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಗೌಪ್ಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರ ನೇತೃತ್ವದಲ್ಲಿ ಇಂದು ನ್ಯಾಯಮೂರ್ತಿಗಳ ಕಚೇರಿ ಒಳಗೆ ಗೌಪ್ಯವಾಗಿ ವಿಚಾರಣೆ ನಡೆಯಲಿದೆ.
ಹಿಂದಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ವಿವಾದಿತ 2.77 ಎಕರೆ ಜಾಗವು ರಾಮಲಲ್ಲಾಗೆ ಸೇರಿದ್ದೆಂದು ನವೆಂಬರ್ 9ರಂದು ಐತಿಹಾಸಿಕ ತೀರ್ಪು ನೀಡಿತ್ತು.
ಈ ತೀರ್ಪು ಮರುಪರಿಶೀಲಿಸುವಂತೆ ಮುಸ್ಲಿಂ ಸಂಘಟನೆಗಳು ಮತ್ತು ಹಿಂದೂ ಮಹಾಸಭಾದಿಂದ ಆರು ಮೇಲ್ಮನವಿಗಳು ಸಲ್ಲಿಕೆಯಾಗಿವೆ.