ಉತ್ತರ ಪ್ರದೇಶ,ಆ,5,2020(www.justkannada.in): ‘130 ಕೋಟಿ ಭಾರತೀಯರು ಮತ್ತು ಭಾರತದ ಬಗ್ಗೆ ಗೌರವವಿರುವ ಕೋಟ್ಯಂತರ ಜನರ ಭಾವನೆಗಳಿಗೆ ಗೌರವ ಕೊಟ್ಟ ಐತಿಹಾಸಿಕ ದಿನ ಇದು. ಪ್ರಧಾನಿ ಮೋದಿ ಅವರಿಂದ ಕೋಟ್ಯಾಂತರ ಭಾರತೀಯರ ಕನಸು ಇಂದು ಸಾಕಾರವಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನುಡಿದರು.
ಇಂದು ಆಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಕಳೆದ ಐದು ಶತಮಾನಗಳ ಸಂಕಲ್ಪ ಈಗ ಪೂರ್ಣಗೊಳ್ಳುತ್ತಿದೆ. ಉತ್ತರ ಪ್ರದೇಶದ ಪವಿತ್ರ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿದೆ. ಈ ದಿನ ಐತಿಹಾಸಿಕ ಭಾವನಾತ್ಮಕ ದಿನ. ಇದು ಎಲ್ಲಾ ಭಾರತೀಯರಿಗೆ ಸಂದ ಗೌರವ. ಕೋಟ್ಯಾಂತರ ಭಾರತೀಯರ ಕನಸು ಪ್ರಧಾನಿ ಮೋದಿಯಿಂದ ಸಾಕಾರ. 5 ಶತಮಾನಗಳ ಹೋರಾಟಕ್ಕೆ ತಾಳ್ಮೆಗೆ ಸಿಕ್ಕ ಪ್ರತಿಫಲ ಎಂದು ನುಡಿದರು.
ದೇಶವೇ ಕೊರೋನಾ ವಿರುದ್ದ ಹೋರಾಡುತ್ತಿದೆ. ಈ ವೇಳೆ ನಿಯಮ ಪಾಲಿಸಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾಡಿದ್ದೇವೆ. ರಾಮಮಂದಿರ ನಿರ್ಮಾಣ ಕಾರ್ಯಕ್ರಮವಲ್ಲ. ಅದು ರಾಮರಾಜ್ಯ ನಿರ್ಮಾಣ ಕನಸಿಕ ಕಾರ್ಯಕ್ರಮ ಎಂದು ಯೋಗಿ ಆದಿತ್ಯನಾಥ್ ಬಣ್ಣಿಸಿದರು.
Key words: ayodhya- ram mandir-construction-PM-Narendra modi-cm- yogi adityanath