ಮೈಸೂರು,ಜು,25,2020(www.justkannada.in): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಿಸಲು ಅಗಸ್ಟ್ 5 ರಂದು ಭೂಮಿಪೂಜೆ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿದ್ದು ಈ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ನಿಂದ ಕಾವೇರಿ ಹಾಗೂ ಕಪಿಲ ನದಿಗಳ ಪವಿತ್ರ ಜಲ ಅಯೋಧ್ಯೆಗೆ ರವಾನೆ ಮಾಡಲಾಗುತ್ತಿದೆ.
ಅಯೋಧ್ಯೆಗೆ ಕಾವೇರಿ ಮತ್ತು ಕಪಿಲಾ ನದಿಗಳ ಜಲ ರವಾನಿಸುವ ಕಾರ್ಯಕ್ರಮಕ್ಕೆ ಶಾಸಕರಾದ ಎಸ್.ಎ ರಾಮದಾಸ್ ಹಾಗೂ ಎಲ್. ನಾಗೇಂದ್ರ ಚಾಲನೆ ನೀಡಿದರು. ನಗರದ ಕೋಟೆ ಆಂಜನೇಯಸ್ವಾಮಿ ಮುಂಭಾಗದಲ್ಲಿ ವಿಹೆಚ್ ಪಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಸೇರಿದಂತೆ ವಿಹೆಚ್ಪಿ ಪದಾಧಿಕಾರಿಗಳು ಭಾಗಿಯಾಗಿದ್ದರು.
Key words: ayodhya- ramamandir-mysore- caveri-kapila-river-water