ಬೆಂಗಳೂರು, ಫೆಬ್ರವರಿ 23, 2022 (www.justkannada.in): ನೀನಾಸಂ ಸತೀಶ್- ರಚಿತಾ ರಾಮ್ ಜೋಡಿಯ ‘ಏನಮ್ಮಿ ಏನಮ್ಮಿ’ ಸಾಂಗ್ 100 ಮಿಲಿಯನ್ ಕ್ಲಬ್ ಸೇರಿದೆ.
ಹೌದು. ‘ಅಯೋಗ್ಯ’ ಸಿನಿಮಾದ ‘ಏನಮ್ಮಿ ಏನಮ್ಮಿ’ ಹಾಡು ಯೂಟ್ಯೂಬಿನಲ್ಲಿ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ 100 ಮಿಲಿಯನ್ ಗೂ ಹೆಚ್ಚು ಬಾರಿ ಅಂದರೆ 10 ಕೋಟಿಗೂ ಹೆಚ್ಚು ವ್ಯೂಸ್ ಪಡೆದಿದೆ.
ಅಂದಹಾಗೆ ಶ್ರೀಮುರಳಿ ಅಭಿನಯದ ಸೂಪರ್ ಹಿಟ್ ‘ಮದಗಜ’ ಸಿನಿಮಾವನ್ನು ನಿರ್ದೇಶಿಸಿದ್ದ ಮಹೇಶ್ ಕುಮಾರ್ ಅವರಿಗೆ ನಿರ್ದೇಶಕರಾಗಿ ಮೊದಲ ಬ್ರೇಕ್ ನೀಡಿದ್ದ ಸಿನಿಮಾ ಅಯೋಗ್ಯ.
ಗ್ರಾಮ್ಯ ಸೊಗಡಿನ ಗೀತೆಯನ್ನು ‘ಭರ್ಜರಿ’ ಚೇತನ್ ಕುಮಾರ್ ರಚಿಸಿದ್ದು, ಅರ್ಜುನ್ ಜನ್ಯಾ ಸಂಗೀತ ನೀಡಿದ್ದರು.