ಬೆಂಗಳೂರು, ಜು.26, 2019 : (www.justkannada.in news) : ಬಿ.ಎಸ್.ಯಡಿಯೂರಪ್ಪ ಅಂದಾಕ್ಷಣ ಬಿಳಿ ಸಫಾರಿ ಧರಿಸಿದ ವ್ಯಕ್ತಿಯೇ ಕಣ್ ಮುಂದೆ ಬರುತ್ತಾರೆಯೇ ವಿನಾಃ, ಬೇರೆ ಬಣ್ಣದ ವಸ್ತ್ರದಲ್ಲಿ ಊಹಿಸಲು ಅಸಾಧ್ಯ. ಅದ್ಯಾಕೆ ಹೀಗೆ ಎಂಬ ಪ್ರಶ್ನೆ ಮೂಡುವುದು ಸಹಜ.
ಇದೀಗ ಈ ಪ್ರಶ್ನೆಗೂ ಉತ್ತರ ಲಭಿಸಿದೆ. ಹಿರಿಯ ಪತ್ರಕರ್ತ ಡಿ.ಪಿ.ಸತೀಶ್ ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ. ಮಾತ್ರವಲ್ಲ ಅದನ್ನು ತನ್ನ ಫೇಸ್ ಬುಕ್ ಪುಟದಲ್ಲೂ ಬರೆದುಕೊಂಡಿದ್ದಾರೆ. ಅದರ ವಿವರ ಹೀಗಿದೆ…
ಕೆಲವು ವರ್ಷಗಳ ಹಿಂದೆ, ದೆಹಲಿಯ Ambassador Hotel ನಲ್ಲಿ ನಾವಿಬ್ಬರೇ ಊಟ ಮಾಡುವಾಗ ನನಗೆ ಅವರೇ ಹೇಳಿದ್ದು.
“ನಮ್ಮ ಪಕ್ಷ ಚಿಕ್ಕದಿದ್ದಾಗ ನಾನು ಪಕ್ಷ ನಡೆಸಲು ಹಣ ಸಂಗ್ರಹಿಸಲು ಕೆಲವು ಉದ್ಯಮಿಗಳ ಬಳಿ ಹೋಗುತ್ತಿದ್ದೆ. ನಮಗೆ ತುಂಬಾ ಕಡಿಮೆ ನೆರವು ಸಿಗುತ್ತಿತ್ತು. ಪರಿಸ್ಥಿತಿ ಕಷ್ಟ ಇತ್ತು. ಒಂದು ದಿನ ಶ್ರೀ ಹರಿ ಖೋಡೆ ಅವರು ನನಗೆ ನೀವು ಎಲ್ಲರೂ ಗುರುತು ಹಿಡಿಯುವ ರೀತಿ ಬಟ್ಟೆ ಹಾಕಬೇಕು. ನಿಮ್ಮ ಬಟ್ಟೆಯೇ ನಿಮ್ಮ ಗುರುತಾಗಬೇಕು. ಅದನ್ನು ನೋಡಿಯೇ ಜನ ಯಡಿಯೂರಪ್ಪ ನವರು ಬಂದರು ಎನ್ನಬೇಕು ಎಂದರು. ಅಂದಿನಿಂದ ನಾನು ಕೇವಲ ಬಿಳಿ ಬಟ್ಟೆ ತೊಡಲು ಶುರುಮಾಡಿದೆ. ಕಳೆದ 30 ವರ್ಷಗಳಲ್ಲಿ ನಾನು ಬಿಳಿ ಸಫಾರಿ ಬಿಟ್ಟು ಬೇರೆ ಬಟ್ಟೆ ಹಾಕಿಲ್ಲ. ಸಾಯೋತನಕ ಹಾಕೋದೂ ಇಲ್ಲ”.
ಕೃಪೆ : ಡಿ.ಪಿ.ಸತೀಶ್/ facebook
—
key words : b.s.yadiyurappa-cm-white-dress-media-d.p.sathis-karnataka