ಸಿಎಂ ಸಿದ್ದರಾಮಯ್ಯ ವಿಪಕ್ಷ ಮತ್ತು ಸಿಎಂ ಆಕಾಂಕ್ಷಿಗಳನ್ನ ಹೆದರಿಸುವ ಕೆಲಸ ಮಾಡುತ್ತಿದ್ದಾರೆ- ಬಿ.ವೈ  ವಿಜಯೇಂದ್ರ

ಗದಗ,ಏಪ್ರಿಲ್,22,2025 (www.justkannada.in):  ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷಗಳು ಮತ್ತು ಸಿಎಂ ಆಕಾಂಕ್ಷಿಗಳನ್ನ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ  ವಿಜಯೇಂದ್ರ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಜನಾಕ್ರೋಶ ಯಾತ್ರೆಯಿಂದ ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಈ ವಿಚಾರ ಮರೆ ಮಾಚಲು ಜಾತಿಗಣತಿ ವಿಚಾರ ಎತ್ತಿದ್ದಾರೆ. ವಿಪಕ್ಷಗಳನ್ನ ಹೆದರಿಸುವ ಕೆಲಸವನ್ನ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಿಎಂ ಆಕಾಂಕ್ಷಿಗಳನ್ನೂ ಹೆದರಿಸುವ  ಕೆಲಸ ಮಾಡುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಕರಪ್ಟ್ ರಾಜಕಾರಣಿ. ಮುಡಾ ಹಗರಣದಲ್ಲಿ ನಾವು ತಪ್ಪು ಎಸಗಿಲ್ಲ ಎಂದರು ಆದರೆ ಸಿಎಂ 14 ನಿವೇಶನ ವಾಪಸ್ ಕೊಟ್ಟರು. ಹೀಗಾಗಿ ಸಿದ್ದರಾಮಯ್ಯ ಭ್ರಷ್ಟರು ಅಂತಾ ಗೊತ್ತಾಗಿದೆ. ಬೆಲೆ ಏರಿಕೆ ಪರಿಣಾಮ ಕರ್ನಾಟಕ ದುಬಾರಿ ರಾಜ್ಯ ಎನ್ನುವಂತಾಗಿದೆ ಎಂದು ಬಿವೈ ವಿಜಯೇಂದ್ರ  ಕಿಡಿಕಾರಿದರು.

Key words: CM Siddaramaiah, intimidate, opposition, CM aspirants,  B.Y. Vijayendra