ನವದೆಹಲಿ,ಅಕ್ಟೋಬರ್,8,2020(www.justkannada.in): ದಕ್ಷಿಣ ದಿಲ್ಲಿಯ ಮಾಲವಿಯಾ ನಗರ್ ಪ್ರದೇಶದ ರಸ್ತೆ ಬದಿಯ “ಬಾಬಾ ಕಾ ಧಾಬಾ” ಸೋಷಿಯಲ್ ಮೀಡಿಯಾದ ತಾಖತ್ ಗೆ ಸಾಕ್ಷಿಯಾಗಿದೆ.
ಈ ಧಾಬಾ ನಡೆಸುವ ಹಿರಿಯ ದಂಪತಿಯ ಮೊಗದಲ್ಲಿ ಈಗ ಸಂತಸ ಮನೆ ಮಾಡಿದೆ. ಅದಕ್ಕೆ ಕಾರಣ ಕುತೂಹಲಕಾರಿ. ಈ ಧಾಬಾ ನಡೆಸುವ 80 ವರ್ಷದ ಕಾಂತಾ ಪ್ರಸಾದ್ ಮತ್ತವರ ಪತ್ನಿ ಬಾದಾಮಿ ದೇವಿ ಕೆಲದಿನಗಳಿಂದ ವ್ಯಾಪಾರವಿಲ್ಲದೆ ಜೀವನ ನಡೆಸಲು ಹರಸಾಹಸ ಪಡುತ್ತಿದ್ದರು.
ಬ್ಲಾಗರ್ ಒಬ್ಬರು ಈ ಬಗ್ಗೆ ವಿಡಿಯೋ ಸಮೇತ ಪೋಸ್ಟ್ ಮಾಡಿ ನೆರವಿಗೆ ಮನವಿ ಮಾಡಿದ್ದರು. ಇದಾದ ಕೆಲವೇ ಕೆಲ ಹೊತ್ತಿನಲ್ಲಿ ಧಾಬಾಗೆ ಜನಸಾಗರವೇ ಹರಿದು ಬಂತು. ಜತೆಗೆ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ಈ ವೃದ್ಧ ದಂಪತಿ ಸಹಾಯಕ್ಕೆ ಮುಂದಾದರು.ಈಗ ದಂಪತಿ ಮೊಗದಲ್ಲಿ ನಗು ಅರಳಿದೆ.
Key words: “Baba Ka Dhaba- social media –Taqhat- Couple-happy