ಮೈಸೂರು,ಏಪ್ರಿಲ್,6,2025 (www.justkannada.in): ಬಾಬು ಜಗಜೀವನರಾಮ್ ಅವರಿಗೆ ಅಗೌರವ ತೋರಿದ್ದಾರೆಂದು ಆರೋಪಿಸಿ ಮುಖಂಡರು ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದ ಘಟನೆ ಹೆಚ್ ಡಿ ಕೋಟೆಯಲ್ಲಿ ನಡೆದಿದೆ.
ಹೆಚ್.ಡಿ ಕೋಟೆ ತಾಲೂಕು ಆಡಳಿತದ ವತಿಯಿಂದ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದ್ದರು. ನಂತರ ಭಾಷಣದ ಬಳಿಕ ಮತ್ತೂಂದು ಕಾರ್ಯಕ್ರಮ ನಿಮಿತ್ತ ಶಾಸಕ ಅನಿಲ್ ಚಿಕ್ಕಮಾದು ಕಾರ್ಯಕ್ರಮದಿಂದ ಹೊರ ನಡೆದರು.
ಕಾರ್ಯಕ್ರಮ ಮುಗಿಯದಿದ್ದರೂ ಶಾಸಕರ ಹಿಂದೆಯೇ ಬಹುಪಾಲು ಅಧಿಕಾರಿಗಳು ಹೊರ ನಡೆದರು. ಅಧಿಕಾರಿಗಳ ಈ ನಡೆಯಿಂದ ಬೇಸರಗೊಂಡ ಅಲ್ಲಿನ ಮುಖಂಡರು ತಹಶಿಲ್ದಾರ್ ಗೆ ತರಾಟೆ ತೆಗೆದುಕೊಂಡರು. , ಅಧಿಕಾರಿಗಳ ಬೇಜವಾಬ್ದಾರಿ ಕಂಡು ರಾಷ್ಟ್ರನಾಯಕನಿಗೆ ಅಗೌರವ ತೋರಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಹೊರನಡೆದ ಘಟನೆ ನಡೆಯಿತು.
ಸ್ಥಳದಲ್ಲಿದ್ದ ಕೆಲವೆ ಅಧಿಕಾರಿಗಳು ಮತ್ತು ಬೆರಳೆಣಿಕೆಯಷ್ಟು ಮುಖಂಡರೊಡನೆ ತಹಶೀಲ್ದಾರ್ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
Key words: Babu Jagjivan Ram, disrespectful, boycotted, program