ಮಂಡ್ಯ,ಜನವರಿ,27,2021(www.justkannada.in) : ಕೆ.ಆರ್.ಎಸ್. ಡ್ಯಾಂ ಉಳಿವಿಗಾಗಿ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸಂಪೂರ್ಣ ಬಂದ್ ಮಾಡುವುದಾಗಿ ಪಾಂಡವಪುರದಲ್ಲಿ ಎ.ಸಿ. ಶಿವಾನಂದ ಮೂರ್ತಿ ಹೇಳಿದ್ದಾರೆ.ಶಿವಮೊಗ್ಗ ಜಿಲ್ಲೆ ಹುಣಸೋಡು ಕಲ್ಲು ಕ್ವಾರೆಯಲ್ಲಿ ಸ್ಪೋಟ ದುರಂತದ ಬಳಿಕ ಕಲ್ಲು ಗಣಿಗಾರಿಕೆ ಮೇಲೆ ತೀವ್ರ ನಿಗಾವಹಿಸಲಾಗಿದೆ.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆ.ಆರ್.ಎಸ್. ಡ್ಯಾಂ ಗೆ ತೊಂದರೆಯಾಗಲಿರುವ ಹಿನ್ನಲೆ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಕಲ್ಲು ಗಣಿಗಾರಿಕೆ ಮೇಲೆ ಡ್ರೋಣ್ ಮೂಲಕ ನಿಗಾ ವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
key words : Baby-hill-Stone-mining-Complete-bundle-
Drone-Surveillance