ಹೊಟ್ಟೆಯಲ್ಲೇ ಮಗು ಸಾವು : ಗರ್ಭಿಣಿಯೂ ಮೃತ: ಪತಿ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ,ಡಿಸೆಂಬರ್,31,2024 (www.justkannada.in): ಹೊಟ್ಟೆಯಲ್ಲೇ 8 ತಿಂಗಳ ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ್ದು ಬಳಿಕ ಗರ್ಭಿಣಿಯೂ ಮೃತಪಟ್ಟಿದ್ದು, ಈ ವಿಷಯ ತಿಳಿದ ಪತಿ ಆತ್ಮಹತ್ಯೆಗೆ ಯತ್ನಿಸಿರುವ  ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ರಾಧಿಕಾ(19) ಮೃತಪಟ್ಟಿರುವ ಗರ್ಭಿಣಿ. ಈಕೆಯ ಪತಿ ಮಲ್ಲೇಶ್(25) ಆತ್ಮಹತ್ಯೆಗೆ ಯತ್ನಿಸಿದವರು. ರಾಧಿಕಾ 6 ಬಾರಿ ಫಿಟ್ಸ್ ಗೆ ತುತ್ತಾಗಿದ್ದು ಈ ಮಧ್ಯೆ ಅವರನ್ನು ಕಿಮ್ಸ್ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಹೊಟ್ಟೆಯಲ್ಲೇ 8 ತಿಂಗಳ ಮಗು ಸಾವನ್ನಪ್ಪಿದ್ದ ಕಾರಣ, ಗರ್ಭಿಣಿ ರಾಧಿಕಾ ಆರೋಗ್ಯ ಸ್ಥಿತಿ ಗಂಭೀರಗೊಂಡಿತ್ತು. ಆದರೇ ಚಿಕಿತ್ಸೆ ಫಲಿಸದೇ ರಾಧಿಕಾ ಇದೀಗ ಸಾವನ್ನಪ್ಪಿದ್ದಾರೆ.

ಪತ್ನಿ ಸಾವಿನ ಸುದ್ದಿಯನ್ನು ಕೇಳಿದ ರಾಧಿಕಾ ಪತಿ ಮಲ್ಲೇಶ್ (25) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Key words: Baby, Pregnant woman, dies, hubbali