ಮೈಸೂರು,ಫೆಬ್ರವರಿ5,2021(www.justkannada.in): ರಾಜ್ಯಾದ್ಯಂತ ಚಿತ್ರಮಂದಿರದಲ್ಲಿ ಹೌಸ್ ಫುಲ್ ಸಿನಿಮಾ ಪ್ರದರ್ಶನ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಆದರೆ ಮೈಸೂರಿನಲ್ಲಿ ಥಿಯೇಟರ್ ಆರಂಭಗೊಳಿಸಲು ಹಿಂದೇಟು ಹಾಕಲಾಗುತ್ತಿದೆ.
ಹೌದು, ಮೈಸೂರು ಸೇರಿದಂತೆ ಚಾಮರಾಜನಗರ, ಹಾಸನ ಜಿಲ್ಲೆಗಳ ಬಹುತೇಕ ಥಿಯೇಟರ್ ಗಳಲ್ಲಿ ಸಿನೆಮಾ ಪ್ರದರ್ಶನವಿಲ್ಲ. ಈ ಕುರಿತು ಮೈಸೂರು ಚಿತ್ರಮಂದಿರಗಳ ಒಕ್ಕೂಟದ ಅಧ್ಯಕ್ಷ ರಾಜಾರಾಮ್ ಹೇಳಿಕೆ ನೀಡಿದ್ದಾರೆ.
ಕೊರೋನಾ ಬಳಿಕ ರಾಜ್ಯಾದ್ಯಂತ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನ ಮಾಡಲು ಸರ್ಕಾರ ಸಮ್ಮತಿ ಸೂಚಿಸಿದೆ. ಆದರೆ ಮೈಸೂರು ಭಾಗದ ಚಿತ್ರಮಂದಿರಗಳು ಚಿತ್ರಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿವೆ. ಪರ್ಸೆಂಟೆಜ್ ರೆವಿನ್ಯೂ ಕಡಿಮೆ ಯಾಗುವ ವರೆಗೂ ಚಿತ್ರಪ್ರದರ್ಶನ ಪ್ರಾರಂಭಿಸುವುದಿಲ್ಲ ಎಂದು ತಿಳಿಸಿವೆ. ಈ ಬಗ್ಗೆ ನಿನ್ನೆ ಮಂಡಳಿ ಸಭೆ ಸೇರಿ ತೀರ್ಮಾನ ತೆಗೆದುಕೊಂಡಿದೆ.
ಹೀಗಾಗಿ ಮೈಸೂರು ಭಾಗದ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿದರೂ ಸಹ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರ ಸಂಘ ಹಿಂದೇಟು ಹಾಕುತ್ತಿದೆ.
ENGLISH SUMMARY…
Cinema hall owners in Mysuru still hesitant to open theaters
Mysuru, Feb. 05, 2021 (www.justkannada.in): The State Government has given a green signal to the Cinema halls to run to their full capacity. But, the theatre owners in Mysuru are still hesitant to open.
Cinema halls in Mysuru, Chamarajanagara, and Hassan Districts are yet to start filming shows. Mr. Rajaram, President of Mysuru Film Theatres Federation has informed though the State Government has permitted us to run the cinema halls with full capacity, the theatre owners in Mysuru district are still hesitant and we won’t commence shows till the percentage revenue won’t reduce. A meeting was held yesterday in this regard where this decision was taken, he has stated in a press release.
Keywords: Cinema halls in Mysuru hesitant to begin shows/ Mysuru/ Chamarajanagara/ Hassa Districts
Key words: back-start – Mysore- theatres- hesitate