ಮಂಡ್ಯ,ಜೂ,28,2019(www.justkannada.in) ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್ ಎಸ್ ಜಲಾಶಯಕ್ಕೆ ಇಂದು ರೈತರು ಮುತ್ತಿಗೆ ಹಾಕಲಿದ್ದು ಈ ಹಿನ್ನೆಲೆ ಕೆ.ಆರ್ ಎಸ್ ಜಲಾಶಯದ ಬಳಿ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ.
ನಾಲೆಗಳಿಗೆ ನೀರು ಬಿಡುವಂತೆ ರೈತರು ಆಗ್ರಹಿಸಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯದಿಂದ ಕೆ.ಆರ್ ಎಸ್ ನತ್ತ ತೆರಳಿ ಕೆ.ಆರ್ ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲಿದ್ದಾರೆ. ಈ ಹಿನ್ನೆಲೆ ಅಲ್ಲಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ವಹಿಸಲಾಗಿದ್ದು ರೈತರು ಅಣೆಕಟ್ಟೆ ತಲುಪುವ ಮೊದಲೇ ರೈತರಿಗೆ ಪೊಲೀಸರು ತಡೆಯೊಡ್ಡಲಿದ್ದಾರೆ.
ಇನ್ನ ಪ್ರತಿಭಟನಾನಿರತ ರೈತರು ನಮ್ಮ ನೀರನ್ನ ನಾವೇ ಬಿಡುತ್ತೇವೆ ಎಂದು ಹೇಳಿತ್ತಿದ್ದಾರೆ. ಇನ್ನು ಕಳೆದ ಎರಡುದಿನಗಳ ಹಿಂದೆ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪ್ರಾಧಿಕಾರ ಉತ್ತಮವಾಗಿ ಮಳೆಯಾದರೇ ಮಾತ್ರ ತಮಿಳುನಾಡಿಗೆ ನೀರು ಬಿಡುವಂತೆ ರಾಜ್ಯಕ್ಕೆ ಸೂಚಿಸಿದೆ.
Key words: Background –Farmers – KRS-Police- tight- security.