ಬೆಂಗಳೂರು, ನವೆಂಬರ್ 08, 2019 (www.justkannada.in): ಬಾಲ್ಯದ ಫೋಟೋಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಟ್ರೋಲಿಗರಿಗೆ ನಟಿ ರಶ್ಮಿಕಾ ಮಂದಣ್ಣ, #Saynotosocialmediaharassment ಎಂಬ ಹ್ಯಾಶ್ಟ್ಯಾಗ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚಿಗೆ ರಶ್ಮಿಕಾ, ತನ್ನ ಬಾಲ್ಯದ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೋಗೆ ಕೆಲವರು ಅಶ್ಲೀಲ ಪದ ಬಳಸಿ ಟ್ರೋಲ್ ಮಾಡಿದ್ದಾರೆ. ಇದರಿಂದ ಬೇಸರಾಗೊಂಡಿರುವ ರಶ್ಮಿಕಾ ಟ್ರೋಲಿಗರ ವಿರುದ್ಧ ಕಿಡಿಕಾರಿದ್ದಾರೆ.
ರಶ್ಮಿಕಾಗೆ ಚಿತ್ರರಂಗದ ಹಲವು ನಟ-ನಟಿಯರು, ನಿರ್ದೇಶಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಟಿ ನೀತು ಶೆಟ್ಟಿ ಕೂಡ ರಶ್ಮಿಕಾಗೆ ಸಪೊರ್ಟ್ ಮಾಡಿದ್ದಾರೆ.