ಮೈಸೂರು,ಫೆ,20,2020(www.justkannada.in): ಈ ಬಾರಿಯ ಬಹುರೂಪಿ ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ರಂಗಾಯಣದ ಏನು ಅಲ್ಲದ ಜನಸಾಮಾನ್ಯರು ಕೂಡ ಬಹುರೂಪಿಯಲ್ಲಿ ಭಾಗವಹಿಸಿದ್ರು. ಈ ಭಾರಿ ಗಾಂಧಿ ಪಥ ಮನೆ ಮನೆಗಳನ್ನು ತಲುಪಿದೆ. ಈ ಯಶಸ್ಸು ನಮ್ಮ ಎಲ್ಲಾ ತಂಡಕ್ಕೂ ಸಲ್ಲುತ್ತದೆ. ಪಂಥಗಳನ್ನು ಮೀರಿ ಪಥಗಳತ್ತ ಹೆಜ್ಜೆ ಹಾಕಿದ್ದೇವೆ. ಎಡ ಪಂಥಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ರಂಗಾಯಣಕ್ಕೆ ಸಂಘರ್ಷಕ್ಕೆ ಬಂದಿಲ್ಲ ಸಮನ್ವಯತೆಗೆ ಬಂದಿದ್ದೇನೆ. ನಾನು ಬಂದಿರುವುದು ರಂಗಾಯಣಕ್ಕಾಗಿ. ಯಾವುದೇ ಪಕ್ಷದ ಬಾವುಟ ಹಾರಿಸಲು ಅಲ್ಲ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.
ಟೀ ಕುಡಿದು ಟೀಕಿಸಿ..
ಟಿಪ್ಪು ಒಬ್ಬ ಮತಾಂಧ ಎಂಬ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಅಡ್ಡಂಡ ಕಾರ್ಯಪ್ಪ, ನನ್ನ ಮಾತು ಸ್ವಲ್ಪ ಒರಟು, ಕೊಡವರ ಮಾತೇ ಹಾಗೆ. ಅಷ್ಟಿಲ್ಲದಿದ್ದರೆ ಕೊಡವರು ದೇಶವನ್ನು ಕಾಯುವುದಕ್ಕೆ ಆಗುತ್ತಿರಲಿಲ್ಲ. ನೀವು ಪತ್ರಕರ್ತರು ಬೇಕಿದ್ದರೆ ಟೀ ಕುಡಿದು ನನ್ನ ಬಗ್ಗೆ ಟೀಕಿಸಿ ಬರೆಯಿರಿ ಎಂದು ಹೇಳಿದರು.
ನಾನು ಹೇಳಿದ್ದು, ಕೊಡವರಿಗೆ ಟಿಪ್ಪು ಎಂದರೆ ಒಬ್ಬ ಮತಾಂಧ. ಮೈಸೂರಿಗರಿಗೆ ಹೆಮ್ಮೆ ಎಂದು ನಾ ಹೇಳಿರುವುದು. ಟಿಪ್ಪು ಕೊಡಗಿನಲ್ಲಿ 12000 ಜನರನ್ನು ಮತಾಂತರ ಮಾಡಿದ್ದ ಎಂದು ಅಡ್ಡಂಡ ಕಾರ್ಯಪ್ಪ ಆರೋಪಿಸಿದರು.
Key words: bahuroopi-success –rangayana director-addanda karyappa