ಇಂದಿನಿಂದ ಮೈಸೂರಿನಲ್ಲಿ ಬಹುರೂಪಿ ನಾಟಕೋತ್ಸವ

ಮೈಸೂರು,ಜನವರಿ,14,2025 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಜನವರಿ19 ರವರೆಗೆ ಬಹುರೂಪಿ ನಾಟಕೋತ್ಸವ ನಡೆಯಲಿದೆ.

ಸಂಜೆ 5.30 ಕ್ಕೆ ಬಹುರೂಪಿ ನಾಟಕೋತ್ಸವಕ್ಕೆ  ಹಿರಿಯ ರಂಗಕರ್ಮಿ ಅತುಲ್ ಕುಲಕರ್ಣಿ ಚಾಲನೆ ನೀಡಲಿದ್ದು, ರಾಷ್ಟ್ರೀಯ ರಂಗಹಬ್ಬಕ್ಕೆ ಕಲಾಮಂದಿರ ಆವರಣ ಮದುವಣಗಿತ್ತಿಯಂತೆ ಸಿಂಗಾರಕೊಂಡಿದೆ.

ದೇಶದ 7 ವಿವಿಧ ಭಾಷೆಯ 22 ನಾಟಕಗಳ ಪ್ರದರ್ಶನಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಬಹುರೂಪಿಯಲ್ಲಿ ಮಕ್ಕಳ ನಾಟಕೋತ್ಸವ ನಡೆಯಲಿದೆ.

ರಂಗಾಯಣದ ಅಂಗಳದಲ್ಲಿ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಜನಪದೋತ್ಸವ ನಡೆಯಲಿದ್ದು, ದೇಶಾದ್ಯಂತ 500 ಕ್ಕೂ ಹೆಚ್ಚು ಕಲಾವಿದರು 300 ಕ್ಕೂ ಹೆಚ್ಚು ಜನಪದ ಕಲಾವಿದರು ಭಾಗಿಯಾಗುವ ನಿರೀಕ್ಷೆ ಇದೆ.

Key words: Bahurupi Drama Festival, Mysore, today