ಅಮಾನವೀಯ ಅಂತ್ಯ ಸಂಸ್ಕಾರ ವಿಚಾರ: 6 ಸಿಬ್ಬಂದಿಗಳು ಸಸ್ಪೆಂಡ್- ಸಭೆ ಬಳಿಕ ಸಿಎಂ ಬಿಎಸ್ ವೈ ಮಾಹಿತಿ…

ಬೆಂಗಳೂರು,ಜು,1,2020(www.justkannada.in): ಬಳ್ಳಾರಿಯಲ್ಲಿ ನಡೆದ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಮಾನವೀಯ ಅಂತ್ಯ ಸಂಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ 6 ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣ ವಿಚಾರ ಕುರಿತು ತಜ್ಞರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಿದರು. ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿಎಸ್ ವೈ, ರೋಗ ಲಕ್ಷಣ ಇಲ್ಲದ ಕೊರೋನಾ ಸೋಂಕಿತರಿಗೆ ಮನೆಯಲ್ಲಿಯೇ ಕ್ವಾರಂಟೈನ್. ಮನೆಯಲ್ಲೇ ಚಿಕಿತ್ಸೆ ನೀಡುವ ಬಗ್ಗೆ ತಜ್ಞರಿಂದ ಸಲಹೆ ನೀಡಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ಅನಗತ್ಯ ಎಂಬ ಬಗ್ಗೆಯೂ ಸಲಹೆ ಬಂದಿದೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಸೋಂಕಿತರಿಗಾಗಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.ballari-corona-death-funaral-6-staff-suspend-cm-bs-yeddyurappa

ನಿನ್ನೆ ಬಳ್ಳಾರಿಯಲ್ಲಿ ಕೊರೋನಾ ಸೋಂಕಿನಿಂದ ಮೃತ ಪಟ್ಟ  8 ಮಂದಿಯನ್ನ ಅಮಾನವೀಯ ರೀತಿಯಲ್ಲಿ ಶವಸಂಸ್ಕಾರ ಮಾಡಲಾದ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಬಳ್ಳಾರಿಯಲ್ಲಿ ಶವಸಂಸ್ಕಾರದ ವಿಚಾರದಲ್ಲಿ ಆಗಿದ್ದನ್ನ ನಾನು ಖಂಡಿಸುತ್ತೇನೆ. ಇವತ್ತು ಬೆಳಿಗ್ಗೆಯೇ 6  ಮಂದಿ ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಿದ್ದೇವೆ. ಇನ್ಮುಂದೆ ಹೀಗೆ ಆಗಲ್ಲ. ೀ ರೀತಿ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

Key words: ballari- corona –death-funaral 6 staff- suspend-CM bs yeddyurappa