ಬಳ್ಳಾರಿ,ಸೆ,24,2019(www.justkannada.in): ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ತುಂಬಿದ ಹಳ್ಳ ದಾಟಿ ಹೋಗುವ ದಾರುಣ ಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಸುಂಡಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಗ್ರಾಮದ ಪರಶುರಾಮ್ (45 ) ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಅಂತ್ಯ ಸಂಸ್ಕಾರ ಮಾಡಲು ಗ್ರಾಮಸ್ಥರು ತುಂಬಿ ಹರಿಯುತ್ತಿರುವ ಹಳ್ಳದಲ್ಲೇ ಹೋಗುವ ಅನಿವಾರ್ಯತೆ ಎದುರಾಗಿದೆ.
ಸ್ಮಶಾನ ಹಳ್ಳದಾಚೆ ಇರುವುದರಿಂದ ಗ್ರಾಮಸ್ಥರು ಪದೇ ಪದೇ ಈ ರೀತಿ ಪರದಾಡುವ ಸ್ಥಿತಿ ಉಂಟಾಗಿದೆ. ಹಳ್ಳದಲ್ಲಿ ಪ್ರವಾಹ ಹಿನ್ನೆಲೆ ಎರಡು ದಿನ ಶವಗಳನ್ನ ಕಾಯ್ದಿರಿಸಿ ನಂತರ ಸಂಸ್ಕಾರ ಮಾಡುವ ದಾರುಣ ಸ್ಥಿತಿ ಈ ಗ್ರಾಮದಲ್ಲಿ ಕಂಡು ಬಂದಿದೆ.
ಒಂದು ವೇಳೆ ಹಳ್ಳ ದಾಟಿ ಹೋಗುವಾಗ ಸ್ವಲ್ಪ ಯಾಮಾರಿದ್ರೂ ಸ್ಮಶಾನಕ್ಕೆ ಹೊರಟವರು ಅಪಾಯಕ್ಕೆ ಸಿಲುಕಿ ಪರದಾಡಬೇಕಾಗುತ್ತದೆ. ಈ ಬಗ್ಗೆ ಪಿಡಿಒ, ತಹಶಿಲ್ದಾರ್, ಡಿಸಿ ವರಗೂ ಮನವಿ ಸಲ್ಲಿದ್ದರೂ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
Key words: ballari- Situation -village – funerals- Perpetual