ಬೆಂಗಳೂರು,ಸೆಪ್ಟಂಬರ್,22,2022(www.justkannada.in): ದೇಶಾದ್ಯಂತ ಎಸ್ ಡಿಪಿಐ ಮತ್ತು ಪಿಎಫ್ ಐ ಕಚೇರಿ ಮೇಲೆ ಎನ್ ಐಎ ದಾಳಿ ವಿಚಾರ ಸಂಬಂಧ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಲುವು ಯಾವಾಗಲೂ ಒಂದೇ ಆಗಿದೆ. ಕಾಲ ಕಾಲಕ್ಕೆ ಪಕ್ಷದ ನಿಲುವು ಬದಲಾಗುವುದಿಲ್ಲ. ಬಜರಂಗ ದಳ, ಪಿಎಫ್ ಐ ಎಸ್ ಡಿ ಯಾವುದೇ ಸಂಘಟನೆ ಇರಲಿ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದರು.
ಇಂತಹ ಸಂಘಟನೆ ಬ್ಯಾನ್ ಮಾಡಿ ಎಂದು ನಾವೇ ಹೇಳಿದ್ದೇವೆ. ಅದರೆ ಸಂಘಟನೆ ಬ್ಯಾನ್ ಮಾಡಲು ಅವರು ತಯಾರಿಲ್ಲ. ಎಲ್ಲಾ ಸಂಘಟನೆಗಳನ್ನ ಬ್ಯಾನ್ ಮಾಡಿ . ನಮ್ಮ ಬೆಂಬಲ ಇರುತ್ತೆ ಎಂದು ಎಂ.ಬಿ ಪಾಟೀಲ್ ಸಲಹೆ ನೀಡಿದರು.
Key words: Ban- all –organizations- Former minister- MB Patil.