ಬೆಂಗಳೂರು,ಆಗಸ್ಟ್,1,2023(www.justkannada.in): ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಆಟೋ, ಟ್ರ್ಯಾಕ್ಟರ್, ಬೈಕ್ ಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತ ತಡೆಯಲು ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆಯಿಂದ ಈ ಹೊಸ ನಿಯಮ ಜಾರಿಯಾಗಿದೆ. ಬೆಂ-ಮೈ ಎಕ್ಸ್ಪ್ರೆಸ್ ವೇನಲ್ಲಿ ಇಂದಿನಿಂದ ಆಟೋ, ಟ್ರ್ಯಾಕ್ಟರ್, ಬೈಕ್ಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಹೆದ್ದಾರಿ ಮೇಲೆ ಸಂಚಾರಕ್ಕೆ ಅರ್ಹ ಅಲ್ಲದ ವಾಹನಗಳಿಗೂ ನಿರ್ಬಂಧ ಹೇರಲಾಗಿದೆ.
ನಿಯಮ ಮೀರಿ ಎಕ್ಸ್ ಪ್ರೆಸ್ ವೇ ಬಳಸಿದರೆ 500 ರೂ. ದಂಡ ಬೀಳಲಿದೆ. ಬೈಕ್,ಆಟೋ, ಟ್ರ್ಯಾಕ್ಟರ್ ಗಳು ಸರ್ವೀಸ್ ರೋಡ್ ಬಳಸುವಂತೆ ಸೂಚಿಸಲಾಗಿದೆ. ಬೆಂ-ಮೈ ಎಕ್ಸ್ಪ್ರೆಸ್ ವೇನ 9 ಕಡೆ ಹಾಗೂ ಹೆದ್ದಾರಿಯ ಎಂಟ್ರಿ ಅಂಡ್ ಎಕ್ಸಿಟ್ ಪಾಯಿಂಟ್ ಗಳಲ್ಲಿ ಚೆಕಿಂಗ್ ಮಾಡಲಾಗುತ್ತಿದೆ. ರಾಮನಗರದ ಹೆಜ್ಜಾಲ ಟೋಲ್ ನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಒಂದೊಂದೇ ವಾಹನಗಳನ್ನ ತಡೆದು ವಾಪಸ್ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.
Key words: ban –auto-tractor-bike –bangalore-mysore Expressway- Violation – rules – fine.