ಮೈಸೂರು,ಫೆ,28,2020(www.justkannada.in): ಕರ್ನಾಟಕ ಲೋಕಸೇವಾ ಆಯೋಗವು ರಾಜಕೀಯದಿಂದ ಕೂಡಿದೆ. ಹೀಗಾಗಿ ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದು ಮಾಡಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಒತ್ತಾಯಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಕರ್ನಾಟಕ ಲೋಕಸೇವಾ ಆಯೋಗವು ರಾಜಕೀಯದಿಂದ ಕೂಡಿದೆ. ಇಲ್ಲಿ ಆಯ್ಕೆಗಳು ರಾಜಕೀಯ ಪ್ರೇರಿತವಾಗಿ ನಡೆಯುತ್ತಿದೆ. ಪ್ರತಿಯೊಂದು ಹುದ್ದೆಯ ಆಯ್ಕೆಯಲ್ಲಿಯೂ ಹಣವೇ ಮುಖ್ಯವಾಗಿದೆ. ಅದಕ್ಕಾಗಿ ನಾವು ರಾಜ್ಯದ ಮುಖ್ಯಮಂತ್ರಿಯಾದ ಯಡಿಯೂರಪ್ಪರನ್ನ ಕೇಳಿಕೊಳ್ಳುತ್ತೇನೆ. ಕರ್ನಾಟಕ ಲೋಕಸೇವಾ ಆಯೋಗದತ್ತ ನೀವು ಒಮ್ಮೆ ಗಮನಹರಿಸಿ. ಇದನ್ನೆಲ್ಲಾ ಸರಿ ಮಾಡಲು ನೀವೆ ಸರಿಯಾದ ವ್ಯಕ್ತಿ ಎಂದರು.
ಹಾಗೆಯೇ 2015 ರಲ್ಲಿ ನಡೆದ 428 ಹುದ್ದೆಗಳ ಆಯ್ಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸತತ ಎರಡು ವರ್ಷಗಳ ನಂತರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ. ಇದರಲ್ಲೆ ತಿಳಿಯುತ್ತದೆ ಎಷ್ಟು ಆಕ್ರಮ ನಡೆದಿದೆ ಎಂದು. ಕೇಂದ್ರ ಲೋಕಸೇವಾ ಆಯೋಗ ಡಿಜಿಟಲ್ ಮೌಲ್ಯಮಾಪನವನ್ನ ಧಿಕ್ಕರಿಸಿದೆ. ಆದರೆ ರಾಜ್ಯ ಲೋಕಸೇವಾ ಆಯೋಗ ಡಿಜಿಟಲ್ ಮೌಲ್ಯಮಾಪನವನ್ನ ರದ್ದು ಮಾಡಲಿ. ಕೇಂದ್ರ ಲೋಕಸೇವಾ ಆಯೋಗಕ್ಕೆ ಬೇಡವಾದದ್ದು ಇವರಿಗೆ ಯಾಕೆ ಬೇಕು. ಕೂಡಲೇ ಡಿಜಿಟಲ್ ಮೌಲ್ಯಮಾಪನವನ್ನ ರದ್ದು ಮಾಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನ್ಯಾಯವಾಗಿದೆ. ನಾವು ಸಾಮಾನ್ಯರ ಜೊತೆ ಹೋರಾಟಲು ಸಿದ್ದರಿದ್ದೇವೆ. ಅದಕ್ಕಾಗಿ ನಾವು ಹೈಕೋರ್ಟ್, ಸರ್ವೋಚ್ಚ ನ್ಯಾಯಾಲಯಕ್ಕೂ ಹೋಗಲು ಸಿದ್ಧರಿದ್ದೇವೆ ಎಂದು ಪ್ರೊ. ಮಹೇಶ್ ಚಂದ್ರಗುರು ತಿಳಿಸಿದರು.
Key words: ban-Karnataka public service Commission-thinker Prof.-BP Mahesh Chandraguru-mysore