ಮೈಸೂರು,ನವೆಂಬರ್,22,2024 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬಾಳೆ ಮೇಳ ಆಯೋಜನೆ ಮಾಡಲಾಗಿದ್ದು ನೂರಕ್ಕೂ ಹೆಚ್ಚು ತಳಿಯ ಬಾಳೆ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಸಹಜ ಸಮೃದ್ಧ ಸಂಸ್ಥೆ ವತಿಯಿಂದ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಬಾಳೆ ಮೇಳ ಆಯೋಜನೆ ಮಾಡಲಾಗಿದೆ. ಶಾನುಬಾಳೆ, ಕಸ್ತೂರಿ ಬಾಳೆ, ಚಂದ್ರ ಬಾಳೆ, ನಂಜನಗೂಡು ರಸಬಾಳೆ ಸೇರಿದಂತೆ ವಿವಿಧ ಬಗೆಯ ಬಾಳೆ ಹಣ್ಣುಗಳನ್ನು ಪ್ರದರ್ಶನ ಮಾಡಲಾಗಿದೆ.
ಒಂದೇ ಗೊನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಾಳೆ ಹಣ್ಣು ಹೊಂದಿರುವ 4 ರಿಂದ 5 ಅಡಿ ಉದ್ದದ ಸಹಸ್ರ ಬಾಳೆಯು ಬಾಳೆ ಮೇಳದ ಆಕರ್ಷಕ ಕೇಂದ್ರ ಬಿಂದುವಾಗಿದೆ .ಲಾಭದಾಯಕ ಬೆಳೆಗಳಲ್ಲಿ ಬಾಳೆ ಬೆಳೆ ಕೂಡ ಒಂದು. ಮದುವೆ, ಗೃಹಪ್ರವೇಶ ಸೇರಿದಂತೆ ಇತರೆ ಶುಭ ಕಾರ್ಯಗಳಲ್ಲಿ ಅಲಂಕಾರಕ್ಕೆ ಬಳಕೆ ಮಾಡಲಾಗುತ್ತದೆ. ಬಾಳೆ ಬೆಳೆ ಹೆಚ್ಚಿನ ಲಾಭದಾಯಕವಾಗಿದೆ. ಬಾಳೆ ಬೆಳೆಯಲ್ಲಿ ಹಲವು ತಳಿಗಳು ಇವೆ. ರೈತರು, ಸಾರ್ವಜನಿಕರು ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ರೈತ ಪ್ರಸಾದ್ ಹೆಗ್ಡೆ ತಿಳಿಸಿದರು.
Key words: Banana fair, Mysore, varieties, bananas