ಬೆಂಗಳೂರು,ಸೆಪ್ಟಂಬರ್,11,2023(www.justkannada.in): ಶಕ್ತಿಯೋಜನೆಯಿಂದಾಗುವ ನಷ್ಟ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳು ನಡೆಸಿದ ಮುಷ್ಕರ ರಾಜಕೀಯ ಪ್ರೇರಿತವಾದದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಖಾಗಿ ಬಸ್ ಅವರಿಗೆ ತೊಂದರೆ ಆಗಿರೋದು ನಿಜ. ಖಾಸಗಿ ಸಾರಿಗೆ ಒಕ್ಕೂಟಕ್ಕೆ ಹೋರಾಟ ಮಾಡುವ ಹಕ್ಕು ಇದೆ. ಖಾಸಗಿ ಬಸ್, ಆಟೋ ಚಾಲಕರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಓಲಾ, ಉಬರ್ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ. ರಾಜಕೀಯ ಪ್ರೇರಿತ ಹೋರಾಟ ಮಾಡುವ ಅವಶ್ಯಜತೆ ಇಲ್ಲ ಎಂದು ಹೇಳಿದರು.
ಈ ಕುರಿತು ಗೃಹ ಸಚಿವ ಡಾ ಜಿ.ಪರಮೇಶ್ವರ್ ಮಾತನಾಡಿ, ಪ್ರತಿಭಟನೆ ವೇಳೆ ಎಲ್ಲೂ ಕೂಡ ದೊಡ್ಡ ಗಲಾಟೆಗಳೇನು ಆಗಿಲ್ಲ. ಅವರವರ ಮಧ್ಯೆ ಸಣ್ಣಪುಟ್ಟ ಗಲಾಟೆಗಳಾದ ವರದಿಯಾಗಿದೆ. ನಾವು ಪ್ರತಿಭಟನೆ ಬಗ್ಗೆ ಮೊದಲೇ ಎಚ್ಚರಿಸಿದ್ದವು ಎಂದರು.
Key words: Bandh –private- transport -companies –politically- motivated- DCM -DK Shivakumar.