ಗುಂಡ್ಲುಪೇಟೆ,ಏಪ್ರಿಲ್,6,2025 (www.justkannada.in): ಬಂಡಿಪುರ ರಾತ್ರಿ ಸಂಚಾರ ನಿರ್ಬಂಧ ತೆರವು ಯತ್ನಕ್ಕೆ ವಿರೋಧ ತೀವ್ರಗೊಂಡಿದ್ದು ಇಂದು ಮದ್ದೂರು ಚೆಕ್ ಪೋಸ್ಟ್ ವರೆಗೆ ಸ್ಥಳೀಯ ಪರಿಸರವಾದಿಗಳು, ರೈತ ಸಂಘಟನೆಗಳು ಪಾದಯಾತ್ರೆ ನಡೆಸಿದರು.
ಗುಂಡ್ಲುಪೇಟೆ ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದಿಂದ ಮದ್ದೂರು ಚೆಕ್ ಪೋಸ್ಟ್ ವರಗೆ ಪಾದಯಾತ್ರೆ ನಡೆಸಿದ್ದು ಪಾದಯಾತ್ರೆ ಕಾರ್ಯಕ್ರಮದಲ್ಲಿ ನಿವೃತ್ತಿ ಅರಣ್ಯ ಅಧಿಕಾರಿ ಬಾಲಚಂದರ್ ಭಾಗಿಯಾಗಿದ್ದರು.
‘ಬಂಡಿಪುರದೆಡೆಗೆ ನಮ್ಮ ನಡಿಗೆ’ ಎಂಬ ಕಾರ್ಯಕ್ರಮದ ಮೂಲಕ ಸ್ಥಳೀಯರಿಗೆ ಜಾಗೃತಿ ಮೂಡಿಸುವ ಮೂಲಕ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ರಾತ್ರಿ ಸಂಚಾರ ತೆರವಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ಒತ್ತಡ ಹೆಚ್ಚಾಗಿದ್ದು, ವಿವಿಧ ರೈತಪರ,ಪರಿಸರವಾದಿಗಳು ಹೋರಾಟ ಶುರು ಮಾಡಿದ್ದಾರೆ.
Key words: Opposition, Bandipur, Night, Traffic,