ಬೆಂಗಳೂರು,ಸೆಪ್ಟಂಬರ್, 7,2020(www.justkannada.in): ಬೆಂಗಳೂರು ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಅಂತರ ರಾಷ್ಟ್ರ ಹಾಗೂ ಅಂತರ ರಾಜ್ಯ ಸಂಪರ್ಕ ಹೊಂದಿದ್ದ 11 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ಸುಮಾರು 90 ಲಕ್ಷ ಮೌಲ್ಯದ ವಿವಿದ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದೇಶ ಮತ್ತು ಹೊರರಾಜ್ಯಗಳಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತಂದು ತಡ ರಾತ್ರಿ ಪಾರ್ಟಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳ ಬಳಿ ಮಾರಾಟ ಮಾಡುತ್ತಿದ್ದ 11 ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 90 ಲಕ್ಷಮೌಲ್ಯದ ವಿವಿಧ ಬಗೆಯ ಮಾದಕವಸ್ತುಗಳಾದ 1100 ಎಲ್.ಎಸ್.ಡಿ ಸ್ಟ್ರಿಪ್ಸ್, 980 ಎಂ.ಡಿ.ಎಂ.ಎ ಟ್ಯಾಬ್ಲೆಟ್ಸ್, 450 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್, 25 ಗ್ರಾಂ ಬ್ರೌನ್ ಶುಗರ್, 500 ಮಿ.ಲೀ ವೀಡ್ ಆಯಿಲ್ ಮತ್ತು 48 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಹಲಸೂರು ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಡಾರ್ಕ್ ವೆಬ್ ಅಂರ್ತಜಾಲದ ಮುಖಾಂತರ ಬಿಟ್ ಕಾಯಿನ್ ಬಳಸಿ ಸ್ಟಾಂಪ್, ಪಿಲ್ಸ್, ಚಾರ್ಲಿ ಮುಂತಾದ ಮಾದಕ ವಸ್ತುಗಳನ್ನು ಖರೀದಿಸಿ Dunzo & Rapido bike delivery ಮುಖಾಂತರ ಸರಬರಾಜು ಮಾಡಿಸುತ್ತಿದ್ದ ಈವೆಂಟ್ ಆರ್ಗನೈಜರ್ ನನ್ನ ಬಂಧಿಸಿ ಲಕ್ಷಾಂತರ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಕೇವಲ್ ಎಂ. ಲೋಹಿತ್ ಆರೋಪಿಯಾಗಿದ್ದು ಬಿ.ಸಿ.ಎ ವಿಧ್ಯಾರ್ಥಿಯಾಗಿದ್ದಾನೆ. ಈತ ಮಾದಕ ವಸ್ತುಗಳ ಚಟಕ್ಕೆ ಬಿದ್ದು; ತನ್ನ ಚಟಗಳಿಗೆ ಹಣ ಸಾಲಲಾರದೆ ಹೆಚ್ಚಿನ ಹಣದ ದುರಾಸೆಗಾಗಿ ಎಲ್.ಎಸ್.ಡಿ, ಎಂ.ಡಿ.ಎಂ.ಎ., ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.
ಇನ್ನು ರಾಮಮೂರ್ತಿ ನಗರ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಎಂ.ಡಿ. ಮಿಯಾ, ಬಿ.ಎಸ್, ಬೂಮ್ ಮಾದಕ ವಸ್ತುಗಳನ್ನು ಹೊರರಾಜ್ಯಗಳಿಂದ ಖರೀದಿಸಿ ಬೆಂಗಳೂರು ಮತ್ತು ಕೇರಳ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿ ಲಕ್ಷಾಂತರ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಮತ್ತು ಗಾಂಜಾ (ಬೂಮ್) ವಶಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೂಮ್ ಮಾದಕ ವಸ್ತುಗಳನ್ನು ಹೊರರಾಜ್ಯಗಳಿಂದ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಶೇಕ್ ಮೊಹಮದ್ ಯಾಸೀನ್ ಬಂಧಿತ ಆರೋಪಿ. ಈತನು ಹೈದರಾಬಾದ್ ಸಮೀಪದ ಆದಿಲಾಬಾದ್ ನಿಂದ ಗಾಂಜಾವನ್ನು ತಂದು ಮನೆಯಲ್ಲಿಯೇ ದಾಸ್ತಾನು ಮಾಡಿಟ್ಟುಕೊಂಡು ಪಾಕೆಟ್ ಮಾಡಿ ಸಾರ್ವಜನಿಕವಾಗಿ, ಶಾಲಾ ಕಾಲೇಜುಗಳಬಳಿ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ, ಈತನ ಬಳಿ 19 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ.
ಕೊರಿಯರ್ ಮುಖಾಂತರ ಬೂಮ್ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ನನ್ನ ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಕುಮಾರ್ ಬಂಧಿತ ಆರೋಪಿ. ಕೊರಿಯರ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡು ಕೊರಿಯರ್ ಮುಖಾಂತರ ಈತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲ್ವೇ ಸ್ಟೇಷನ್ ಬಳಿ ಬೂಮ್ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ನನ್ನ ಪೊಲೀಸರು ಬಂಧಿಸಿದ್ದಾರೆ. ರಾಂಬಾಬು (ಚಿತ್ತೂರು, ಆಂದ್ರಪ್ರದೇಶ), ಮೋಹನ್ ರಾಜ್, (ಮುಳಬಾಗಿಲು, ಕೋಲಾರ) ಬಂಧಿತ ಆರೋಪಿಗಳು. ಈ ಆರೋಪಿಗಳು ರೈಲಿನ ಮುಖಾಂತರ ಮಾದಕ ವಸ್ತುಗಳ ಸಾಗಣೆ ಮಾಡಿ ರೈಲ್ವೇ ಸ್ಟೇಷನ್ ಗಳ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
Key words: Bangalore-11 Drugs Peddler -Arrested – Interstate -Interstate -Connection.