ಬೆಂಗಳೂರು, ಸೆಪ್ಟೆಂಬರ್ 10, 2021 (www.justkannada.in): ಬೆಂಗಳೂರಿನಲ್ಲಿ 136 ಕಡೆ ವಿದ್ಯುತ್ ರೀ ಚಾರ್ಜಿಂಗ್ ಸೆಂಟರ್ ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ಸೆಂಟರ್ ನಿರ್ಮಾಣವಾಗಲಿದೆ ಎಂದು ಇಂಧನ ಸಚಿವ ಸುನಿಲ್ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಸಂಬಂಧ ಮಾಹಿತಿ ನೀಡಿರುವ ಅವರು, ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಿದ್ದೇವೆ ಎಂದು ಇಂಧನ ಸಚಿವ ಸುನಿಲ್ಕುಮಾರ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಲಿದ್ದು, ಭವಿಷ್ಯದಲ್ಲಿ ಇದು ಅನಿವಾರ್ಯವಾಗಲಿದೆ. ಹೀಗಾಗಿ ರೀ ಚಾರ್ಜಿಂಗ್ ಸೆಂಟರ್ ಸ್ಥಾಪಿಸಲು ಹೆಚ್ಚು ಒತ್ತು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
key words: Bangalore as an eco-friendly city … 136 power recharging center in the capital city