‘ B-ಟಿವಿ ‘ ಬ್ಲಾಕ್ ಮೇಲ್ : ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಕೋರಿ ಕೋರ್ಟ್ ಗೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದ ಪೊಲೀಸರು.

Bangalore-b-tv-journalist-black.mail-police-arrested-media

 

ಬೆಂಗಳೂರು, ಜ.08, 2022 : ಮಾನಹಾನಿಕರ ಸುದ್ದಿ ಬಿತ್ತರಿಸುವುದಾಗಿ ಬ್ಲಾಕ್ ಮೇಲ್ ಮಾಡಿ 20 ಲಕ್ಷ ರು. ಲಂಚ ಪಡೆದಿದ್ದ ಆರೋಪದ ಮೇಲೆ ‘B- ಟಿ.ವಿ’ ಕನ್ನಡ ಸುದ್ದಿ ವಾಹಿನಿಯ ಸಿಬ್ಬಂದಿ ತೀರ್ಥಪ್ರಸಾದ್‌ ನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ದೊಡ್ಡಗುಬ್ಬಿ ಮುಖ್ಯ ರಸ್ತೆ ಬಳಿ ವಾಸವಿರುವ ಅನಿಲ್‌ಕುಮಾರ್‌ ನೀಡಿದ ದೂರಿನ ಮೇಲೆ ಮುಖ್ಯ ಆರೋಪಿ ತೀರ್ಥ‌ಪ್ರಸಾದ್‌ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಕುಮಾರ್‌, ಶಿವಸ್ವಾಮಿ, ರಮೇಶ್‌ ಗೌಡ ಹಾಗೂ ಶ್ರೀಧರ್‌ ಎಂಬುವರನ್ನು ವಿಚಾರಣೆಗೆ ಒಳಪಡಿಸುವುದು ಬಾಕಿ ಇದೆ’ . ಈ ಸಂಬಂದ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 384, 504, 506ರ ಅಡಿಯಲ್ಲಿ ಪ್ರಕರಣ ದಾಖಲು.

ಆರೋಪಿಗಳನ್ನು ಇದೇ ಜ. 7 ರಿಂದ 13 ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಕೋರಿ ಇಲ್ಲಿನ 11ನೇ ಎ.ಸಿ.ಎಂ.ಎಂ. ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ಏನಿದು ಘಟನೆ :

ಅನಿಲ್‌ಕುಮಾರ್, ಶ್ರೀಕಾಂತ್ ಕುಮಾರ್, ಸುನಿಲ್ ಕುಮಾರ್ ಎಂಬುವವರು ತಮಗೆ ಸುದ್ದಿ ಪ್ರಸಾರ ಮಾಡದಂತೆ ತಡೆಯಲು ಹಣ ಕೇಳುತ್ತಿದ್ದಾರೆ ಎಂದು ಆಡಿಯೋ ಮತ್ತು ವಿಡಿಯೋ ಸಮೇತ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 504, 506 ಮತ್ತು 34 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ರಕರ್ತ ತೀರ್ಥ ಪ್ರಸಾದ್‌ನನ್ನು ಬಂಧಿಸಿ ಉಳಿದ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಸುದ್ದಿ ಪ್ರಸಾರ ಮಾಡದಂತೆ ತಡೆಯಲು ಹಣ ಕೇಳುತ್ತಿದ್ದಾರೆ ಎಂದು ಅನಿಲ್‌ಕುಮಾರ್, ಶ್ರೀಕಾಂತ್ ಕುಮಾರ್, ಸುನಿಲ್ ಕುಮಾರ್ ಎಂಬುವವರರು ಆಡಿಯೋ ಮತ್ತು ವಿಡಿಯೋ ಸಮೇತ ದೂರು ನೀಡಿದ್ದಾರೆ.

ವಾಹಿನಿಯ ಉದ್ಯೋಗಿ ತೀರ್ಥ ಪ್ರಸಾದ್, ಸುನಿಲ್ ಹಾಗೂ ಅನಿಲ್ ಎಂಬುವವರಿಗೆ ಕರೆ ಮಾಡಿ ‘ 420 ಸೊಣ್ಣಪ್ಪ ಅಂಡ್ ಸನ್ಸ್ – ಮರಳು ಪಾಫಿಯಾ ಡಾನ್‌ಗಳು’ ಎಂಬ ಶೀರ್ಷಿಕೆಯಡಿ ನಮ್ಮ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿ, ನಿಮ್ಮ ಜೊತೆ ಮಾತನಾಡಬೇಕು ಸಿಗುವುದಾಗಿ ತಿಳಿಸಿದ್ದಾರೆ.

ಮುಖಾಮುಖಿ ಭೇಟಿಯಾಗಿ ಮಾತನಾಡಿದ ವೇಳೆ ಮರಳು ಮಾಫಿಯಾ ಮಾಡುವುದರ ಬಗ್ಗೆ ಸುದ್ದಿ ಮಾಡಲಾಗುತ್ತಿದ್ದು, 25 ಲಕ್ಷ ರು. ಕೊಟ್ಟರೆ ಸುದ್ದಿ ಪ್ರಸಾರ ನಿಲ್ಲಿಸಲಾಗುವುದು. ಇಲ್ಲದಿದ್ದರೆ ನಿಮ್ಮ ಮಾನಹಾನಿ ಮಾಡಲಾಗುವುದು ಎಂದು ಅನಿಲ್ ಅವರಿಗೆ ತೀರ್ಥಸ್ವಾಮಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಎಲ್ಲವನ್ನು ರೆಕಾರ್ಡ್ ಮಾಡಿಕೊಂಡಿದ್ದ ಸಹೋದರರು, ವಾಹಿನಿ ವರದಿಗಾರನನ್ನು ಹಣ ನೀಡುವುದಾಗಿ ಕರೆಸಿ ಆತನಿಗೆ ತಿಳಿಯದಂತೆ ವೀಡಿಯೋ ಮಾಡಿಕೊಂಡು ಬಳಿಕ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

key words : Bangalore-b-tv-journalist-black.mail-police-arrested-media