ಸಿಎಂ ಬೊಮ್ಮಾಯಿ ಅವರಿಂದ ಬೆಂಗಳೂರು ಸಿಟಿ ರೌಂಡ್ಸ್:  ಮಳೆಹಾನಿ ಪ್ರದೇಶಗಳಿಗೆ ಭೇಟಿ, ಪರಿಶೀಲನೆ.

ಬೆಂಗಳೂರು,ಅಕ್ಟೋಬರ್,18,2021(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತಿದ್ದು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ನಗರದಲ್ಲಿ ಭಾರಿಮಳೆಯಿಂದಾಗಿ ನೀರು ತುಂಬಿಕೊಂಡಿರುವ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಎಚ್.ಎಸ್ ಆರ್ ಲೇಔಟ್  ಭಾಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದರು.

ಈ ವೇಳೆ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಬೊಮ್ಮಾಯಿ, ಹಂತಹಂತವಾಗಿ ಸಮಸ್ಯೆಗಳನ್ನ ಬಗೆ ಹರಿಸುತ್ತೇವೆ ಎಂದು ಸ್ಥಳೀಯರಿಗೆ ಭರವಸೆ ನೀಡಿದರು. ಬಿಬಿಎಂಪಿ ಮತ್ತು ಜಲಮಂಡಳಿ  ನಡುವೆ ಸಮನ್ವಯತೆ ಕೊರತೆ ಇದೆ. ಎಲ್ಲರನ್ನೂ ಕರೆದು ಮಾತನಾಡುತ್ತೇನೆ. ಮಂತ್ರಿ ಡೆವಲಪರ್ಸ್ ಒತ್ತುವರಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಎನ್ ಜಿಟಿ ಆದೇಶ ನೀಡಿದೆ. ಅದರಂತೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Key words: Bangalore –City- Rounds – CM basavaraj Bommai

ENGLISH SUMMARY…

Bengaluru City Rounds by CM Bommai: Visits rain-hit areas
Bengaluru, October 18, 2021 (www.justkannada.in): Chief Minister Basavaraj Bommai has undertaken city rounds in Bengaluru today. He is visiting rain-hit areas in the city to get a real understanding of the condition.
Several areas in Bengaluru city were inundated in rainwater due to the heavy showers lashing the city for the last week. The Chief Minister visited one of the rain-hit areas in the HSR Layout and listened to the grievances of the citizens.
He instructed the officials concerned to address the problems of the citizens immediately and assured the citizens of solving all the problems at the earliest. “There is a lack of coordination between the BBMP and BWSSB. I will call a meeting and discuss with the officials concerned. I have also instructed the officials to take action on encroachment of land by the Mantri Developers. The NGT has issued orders. We will take measures to remove the encroachment accordingly,” he informed.
Keywords: Chief Minister Basavaraj Bommai/ city rounds/ Bengaluru/ rain-hit areas