ಬೆಂಗಳೂರು, ಅ.11, 2019 (www.justkannada.in news ): ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಠಿಸಿ ಕಿರುಕುಳ ನೀಡುತ್ತಿದ್ದವನ ಬಂಧನ.
ನಗರದ ಸೈಬರ್ ಕ್ರೈಮ್ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ , ತನಗೆ ಪರಿಚಿತರಾದ ಮಹಿಳೆಯ ಭಾವಚಿತ್ರ ಬಳಸಿ ಅನ್ಯ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆ ಮತ್ತು ಆಕೆಯ ಕುಟುಂಬಸ್ಥರ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ನಕಲಿ ಎಫ್.ಬಿ ಖಾತೆಯಲ್ಲಿ ಪೋಸ್ಟ್ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ನಗರದ ಕುರುಬರಹಳ್ಳಿ, ಮಹಲಕ್ಷ್ಮೀಪುರಂ, ಜೆಸಿ ನಗರದ ನಿವಾಸಿ 38 ವರ್ಷದ ಪಿ.ಮಲ್ಲೇಶ್ ಬಂಧಿತ ಆರೋಪಿ. ಈತ ತನಗೆ ಪರಿಚಯವಿದ್ದ ಮಹಿಳೆ ಕಳೆದ ಒಂದು ತಿಂಗಳಿಂದ ಮಾತನಾಡುವುದನ್ನು ನಿಲ್ಲಿಸಿದ್ದಳು, ಪೋನ್ ಕರೆ ಮಾಡಿದರು ಕಾಲ್ ಪಿಕ್ ಮಾಡುತ್ತಿರಲಿಲ್ಲ. ಪರಿಣಾಮ ಕೋಪಗೊಂಡು ಆಕೆಯ ಭಾವಚಿತ್ರ ಬಳಸಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಮಹಿಳೆ ಮತ್ತು ಕುಟುಂಬದವರ ದೂರವಾಣಿ ಸಂಖ್ಯೆ ಪೋಸ್ಟ್ ಮಾಡಿದ್ದ. ಪರಿಣಾಮ ಎಫ್.ಬಿ ನೋಡಿದವರು ದೂರವಾಣಿಗೆ ಕರೆ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
key words : bangalore-cyber-branch-police-arrested-person-created-fake-facebook-account-of-a-women