ಬೆಂಗಳೂರು,ಜೂ,28,2019(www.justkannada.in): ಕಾಮಗಾರಿ ವೀಕ್ಷಣೆಗೆಂದು ಝೀರೋ ಟ್ರಾಫಿಕ್ ನಲ್ಲಿ ತೆರಳುತ್ತಿದ್ದ ವೇಳೆ ಶಾಲಾ ಮಕ್ಕಳ ಬಸ್ ಗೆ ಅಡಚಣೆಯುಂಟಾದ ಹಿನ್ನೆಲೆ ಡಿಸಿಎಂ ಪರಮೇಶ್ವರ್ ಶಾಲಾ ಮಕ್ಕಳ ಬಳಿ ಕ್ಷಮೆ ಕೇಳಿದ್ದಾರೆ.
ಬೆಂಗಳೂರಿನ ಆರ್.ಟಿ ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವೀಕ್ಷಣೆಗಾಗಿ ಡಿಸಿಎಂ ಪರಮೇಶ್ವರ್ ಝೀರೋ ಟ್ರಾಫಿಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಒಂದು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪರಮೇಶ್ವರ್ ಅವರು ಹೋಗಿ ಅರ್ಧ ಗಂಟೆಯಾದರೂ ಶಾಲಾ ವಾಹನ ಸಮೇತ ವಾಹನಗಳು ನಿಂತಿದ್ದವು. ಅಷ್ಟೇ ಅಲ್ಲದೆ ಪರಮೇಶ್ವರ್ ಅವರ ಕಾರಿನ ಹಿಂದೆಯೇ ಸಾಲು ಸಾಲು ಕಾರುಗಳು ಬಂದು ಇನ್ನಷ್ಟು ಸಂಚಾರ ದಟ್ಟಣೆ ಆಗಿತ್ತು,
ಹೀಗಾಗಿ ತಮ್ಮ ಝೀರೋ ಟ್ರಾಫಿಕ್ ನಿಂದ ಶಾಲಾ ಮಕ್ಕಳಿಗೆ ತೊಂದರೆಯಾದ ಹಿನ್ನೆಲೆ ವಿದ್ಯಾರ್ಥಿಗಳ ಬಳಿ ಡಿಸಿಎಂ ಪರಮೇಶ್ವರ್ ಕ್ಷಮೆಯಾಚಿಸಿದ್ದಾರೆ. ನನ್ನಿಂದ ಶಾಲಾ ಮಕ್ಕಳಿಗೆ ತೊಂದರೆಯಾಗಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ನಮ್ಮಿಂದ ಯಾರಿಗೂ ಬೇಸರ ಆಗಬಾರದು. ಮತ್ತೊಮ್ಮೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.
Key words: Bangalore-DCM -Parameshwar- apologized – students