ಬೆಂಗಳೂರು,ನ,16,2019(www.justkannada.in): ಭೂಗಳ್ಳರ ಪರ ನಿಲುವು ತಳೆದಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ ಸ್ಪಷ್ಟನೆ ನೀಡಿದರು.
ವಿಧಾನಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ, ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ಮಾಡಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ಭೂಗಳ್ಳರ ಪರ ನಿಲುವು ತಳೆದಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಬೆಂಗಳೂರಿನ ಕತ್ರಿಗುಪ್ಪೆ ಬಳಿಯ ಸರ್ಕಾರಿ ಜಾಗದ ಸಂಬಂಧ ನಮಗೆ ದೂರು ಬಂದಿತ್ತು. ಇದನ್ನು ನಿಯಮಾನುಸಾರ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಂಡಿದ್ದೇವೆ. ಯಾವುದೇ ದಾಖಲೆ ಇಲ್ಲದೆ ಕೇವಲ ತೆವಲಿಗೆ ರಮೇಶ್ ಇಂತಹ ಆರೋಪ ಮಾಡಿದ್ದಾರೆ. ರಾಜಕೀಯ ಷಡ್ಯಂತ್ರದಿಂದ ಇಂಥ ಆರೋಪ ಮಾಡಿದ್ದಾರೆ. ಬಿಜೆಪಿಯು ಹುಚ್ಚನಂತಹ ವಕ್ತಾರನನ್ನು ಇಟ್ಟುಕೊಂಡಿದೆ. ಬಾಯಿ ಚಪಲಕ್ಕಾಗಿ ಆರೋಪ ಮಾಡ್ತಿರುವ ರಮೇಶ್ ಅವ್ರನ್ನ ಮೂರ್ಖ ಅನ್ನಬೇಕು. ರಮೇಶ್ ರನ್ನು ಸುಮ್ನೆ ಬಿಡಲ್ಲ, ಮಾನಹಾನಿ ಮೊಕದ್ದಮೆ ಹೂಡ್ತೇನೆ. ಸಭಾದ್ಯಕ್ಷರಿಗೂ ದೂರು ಕೊಡ್ತೇನೆ ಎಂದು ಕೃಷ್ಣಾರೆಡ್ಡಿ ತಿಳಿಸಿದರು.
: ನಾವು ಪ್ರಾಮಾಣಿಕವಾಗಿ ಹೋರಾಟ ಮಾಡಿಕೊಂಡು ಬಂದವರು. ಸರ್ಕಾರಿ ಆಸ್ತಿ ರಕ್ಷಣೆಯ ಹೊಣೆ ನನ್ನ ಮೇಲಿದೆ. ಹೀಗಿರುವಲ್ಲಿ ಸುಳ್ಳು ಅರೋಪ ಮಾಡೋದು ಹುಚ್ಚಾಟವಲ್ಲವೇ? ಎಂದು ಎನ್ ಆರ್ ರಮೇಶ್ ವಿರುದ್ದ ಕೃಷ್ಣಾರೆಡ್ಡಿ ಕಿಡಿಕಾರಿದರು.
Key words: bangalore-Deputy Speaker -Krishna Reddy -clarifies -NR Ramesh- allegation