ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರು ಸೇರಿದಂತೆ 14 ಮಂದಿ ಕ್ವಾರಂಟೈನ್ಗೆ : ಬೆಳಗಿನ ಸುದ್ದಿ ಪ್ರಸಾರ ರದ್ದು ಪಡಿಸಿದ ‘ ಚಂದನ’ .

 

ಬೆಂಗಳೂರು, ಮೇ 29, 2020 : (www.justkannada.in news) : ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರು ಸೇರಿದಂತೆ 14 ಮಂದಿ ಈಗ ಕ್ವಾರಂಟೈನಲ್ಲಿ ಇರಿಸಲಾಗಿದೆ.

ಕ್ಯಾಮರಾಮನ್ ಒಬ್ಬರಿಗೆ ಕರೋನ ಪಾಸಿಟಿವ್ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಜತೆಗೆ ದೂರದರ್ಶನದ ದಿನವಹಿ 5 ಬುಲೆಟಿನ್ ಗಳ ಪೈಕಿ ಬೆಳಗ್ಗೆ ಹಾಗೂ ಮಧ್ಯಾಹ್ನದ ಬುಲೆಟಿನ್ ರದ್ದುಪಡಿಸಿ, ಸಂಜೆಯ ಮೂರು ಬುಲೆಟಿನ್ ಪ್ರಸಾರಕ್ಕೆ ಮಾತ್ರ ನಿರ್ಧರಿಸಲಾಗಿದೆ.

ಇದರಿಂದ ಬೆಳಗ್ಗೆ 11 ಗಂಟೆ ಹಾಗೂ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುತ್ತಿದ್ದ ಸುದ್ಧಿ ರದ್ದಾಗಿದೆ. ಆದರೆ ಸಂಜೆ 4.30, ರಾತ್ರಿ 7 ಗಂಟೆ ಹಾಗೂ 9 ಗಂಟೆಗೆ ಪ್ರಸಾರವಾಗುತ್ತಿದ್ದ ಬುಲೆಟಿನ್ ಎಂದಿನಂತೆ ಪ್ರಸಾರವಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Bangalore doordarshan center director along with 14 others under quarantine, due to contact with covid-19 positive cameraman

ಸ್ವಾಬ್ ಟೆಸ್ಟ್ :

ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 20 ಮಂದಿಗೆ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಯಿತು. ಕರೋನಾ ಸೊಂಕಿತ ಕ್ಯಾಮೆರಾಮನ್ ಜತೆಗೆ ಸಂಪರ್ಕಕ್ಕೆ ಬಂದಿದ್ದ ಕಾರಣ ಅವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಏನಿದು ಘಟನೆ :

ಚಂಡಿಗಢದ ದೂರದರ್ಶನ ಕೇಂದ್ರದಲ್ಲಿ ಫ್ಲೋರ್ ಕ್ಯಾಮರಾಮನ್ ಆಗಿರುವ ಸುರೇಶ್ ಎನ್ನುವವರಿಗೆ ಕರೋನಾ ಪಾಸಿಟಿವ್ ಕಂಡು ಬಂದಿತ್ತು. ಕ್ಯಾಮರಾಮನ್ ಸುರೇಶ್, ಮೇ 23 ರ ರಾತ್ರಿ 9 ಗಂಟೆಗೆ ಬೆಂಗಳೂರು ದೂರದರ್ಶನ ‘ಚಂದನ’ ವಾಹಿನಿಯಲ್ಲಿ ಪ್ರಸಾರವಾದ ನ್ಯೂಸ್ ವೇಳೆ ಕರ್ತವ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಕ್ಯಾಮೆರಾಮನ್ ಸಂಪರ್ಕಕ್ಕೆ ಬಂದಿರುವ ನ್ಯೂಸ್ ಆ್ಯಂಕರ್ ಸೇರಿದಂತೆ ನ್ಯೂಸ್ ರೂಮ್ ನ ಇತರೆ ಸಿಬ್ಬಂದಿಗಳಿಗೂ ಇದೀಗ ಕರೋನ ಸಂಕಟ ಎದುರಾಗಿತ್ತು. ಇದೀಗ ಅವರನ್ನು ಕ್ವಾರಂಟೈನಲ್ಲಿರಿಸಲಾಗಿದೆ.

 

oooo

key words :  Bangalore doordarshan center director along with 14 others under quarantine, due to contact with covid-19 positive cameraman