ಬೆಂಗಳೂರು, ಫೆ.20, 2020 : ( www.justkannada.in news ) : ಚೀನಾದಲ್ಲಿ ಕಾಣಿಸಿಕೊಂಡಿರುವ ಕರೋನಾ ಭೀತಿ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಎಚ್.1.ಎನ್.1 ಸೊಂಕಿನ ಭಯ ಆವರಿಸಿದೆ.
ಸಾಫ್ಟ್ ವೇರ್ ಕಂಪನಿಯ ಹೊರಗಡೆ ಕೆಲವರಿಗೆ ಈ ರೋಗ ಲಕ್ಷಣ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ಇತರೆ ಸಿಬ್ಬಂದಿಗಳನ್ನು ಕೆಲ ದಿನಗಳ ಮಟ್ಟಿಗೆ ವರ್ಕ್ ಫ್ರಂ ಹೋಂ, ಅಂದ್ರೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ.
ಬೆಂಗಳೂರಿನ ಎಕೋ ವರ್ಲ್ಡ್ ಸಂಸ್ಥೆಯೇ ಈ ಮುಂಜಾಗ್ರತ ಕ್ರಮ ಕೈಗೊಂಡಿರುವುದು. ಮೂಲಗಳ ಪ್ರಕಾರ ನಗರದ ಇಕೋ ವರ್ಲ್ಡ್ ನಲ್ಲಿ 25 ಕ್ಕೂ ಹೆಚ್ಚು ಸಾಫ್ ವೇರ್ ಸಂಸ್ಥೆಗಳ 5 ಸಾವಿರಕ್ಕೂ ಹೆಚ್ಚುಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದೀಗ ಎಚ್.1ಎನ್.1 (ಸ್ವೈನ್ ಫ್ಲೂ) ಕಾಣಿಸಿಕೊಂಡ ಕಾರಣ ಸಂಸ್ಥೆಯ ಸಿಬ್ಬಂದಿಗಳನ್ನು ಕಡ್ಡಾಯವಾಗಿ ಫೆ. 20 ರಿಂದ 28 ರ ವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ತಿಳಿಸಲಾಗಿದೆ.
ಈ ಸಂಬಂಧ ನಿನ್ನೆಯಷ್ಟೆ ಸಂಸ್ಥೆ, ತನ್ನ ಸಿಬ್ಬಂದಿಗಳಿಗೆ ಇ-ಮೇಲ್ ಮೂಲಕ ಮಾಹಿತಿ ರವಾನಿಸಿದೆ. ಈ ಪತ್ರದಲ್ಲಿ ಸಿಬ್ಬಂದಿ ಆರೋಗ್ಯದ ಕಾಳಜಿ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟ ಪಡಿಸಲಾಗಿದೆ . ಜತೆಗೆ ಇಕೋ ವರ್ಲ್ಡ್ ಆಫೀಸ್ ನ 6 ರಿಂದ 10 ನೇ ಫ್ಲೋರ್ ನ ಸ್ಯಾನಿಟೈಸೇಷನ್ ನಡೆಸಲಾಗುತ್ತದೆ. ಜತೆಗೆ ಮುಂದಿನ 2 ದಿನಗಳ ವರೆಗೆ ಫ್ಯೂಮಿಗೇಷನ್ ಹಾಗೂ ತೀವ್ರ ಸ್ಯಾನಿಟೈಸೇಷನ್ ಮಾಡಲಾಗುವುದು ಎಂದು ಹೇಳಲಾಗಿದೆ.
ಸಿಬ್ಬಂದಿಗಳ ಕುಟುಂಬದವರಲ್ಲಿ ಯಾರಿಗಾದರು ಚಳಿ, ಜ್ವರ ಅಥವಾ ಕೆಮ್ಮು ಕಾಣಿಸಿಕೊಂಡರೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆ, ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸುವಂತೆ ಸಿಬ್ಬಂದಿಗಳನ್ನು ಕೋರಲಾಗಿದೆ.
key world : bangalore-eco-world-software-company-H1N1-work.from.home-techhi