ಬೆಂಗಳೂರು, ನ.14, 2019 : ( www.justkannada.in news ) ರಾಜ್ಯದಲ್ಲಿ ನಮ್ಮ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಬಿಜೆಪಿ, ಕಾಂಗ್ರೆಸ್ ನಮ್ಮನ್ನು ತೆಗೆದುಹಾಕಲು ಆಗಲ್ಲ. ಸಿದ್ದರಾಮಯ್ಯ ಮತ್ತು ನನ್ನ ಮಧ್ಯೆ ಹೋರಾಟ ಬೇರೆ, ಆದರೆ ಹದಿನೈದು ಜನರನ್ನು ಸೋಲಿಸುವುದೇ ನನ್ನ ಗುರಿ ಎಂದು ಮಾಜಿ ಸಿಎಂ ಎಚ್.ಡಿ,ಕುಮಾರಸ್ವಾಮಿ ಘೋಷಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಹೇಳಿದಿಷ್ಟು……
ಕೆ.ಆರ್.ಪೇಟೆ ಪುಣ್ಯಾತ್ಮ ಅಯ್ಯೋ ಯಡಿಯೂರಪ್ಪ ಅಂತಾರೆ. ಕೆ.ಆರ್.ಪೇಟೆಗೆ ನಾನೇನು ಕೊಟ್ಟಿದ್ದೇನೆ ಅಂತ ತೆಗೀರಿ. ಯಶವಂತಪುರದ ಸೋಮಶೇಖರ್ ಕೂಡ ಹಾಗೆ ಹೇಳಿದ್ದಾರೆ. ಆದರೆ ಈಗ ಕಂಟ್ರಾಕ್ಟರ್ ಕರೆಸುತ್ತೇನೆ.
ಎಷ್ಟು ವಸೂಲಿ ಮಾಡಿದ್ದಾರೆ ಗೊತ್ತಾಗುತ್ತದೆ. ರಾಜ್ಯದಲ್ಲಿ ನಮ್ಮ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಬಿಜೆಪಿ, ಕಾಂಗ್ರೆಸ್ ನಮ್ಮನ್ನು ತೆಗೆದುಹಾಕಲು ಆಗಲ್ಲ.
ಸಿದ್ದರಾಮಯ್ಯ ಅವರು ಅಹಂಕಾರ, ಬಾಡಿ ಲಾಂಗ್ವೇಜ್ ಚೇಂಜ್ ಮಾಡಬೇಕು. ಶ್ರೀರಾಮುಲು, ಯಡಿಯೂರಪ್ಪ ಬೇರೆ ಪಕ್ಷ ಮಾಡಿದ್ದರು. ಹೀಗಾಗಿ ನೀವು ಅಧಿಕಾರಕ್ಕೆ ಬಂದಿದ್ದೀರಿ. ನಮ್ಮನ್ನು ಮುಗಿಸಲು ಹೋಗಿ ಅವರ ಮೇಲೆಯೇ ಕಲ್ಲು ಬಂಡೆ ಎಳೆದುಕೊಂಡರು. ಬಿಜೆಪಿ ೧೦೫ ಸ್ಥಾನ ಬರಲು ಕೂಡ ನೀವೇ ಕಾರಣ.
ಕಾಂಗ್ರೆಸ್ ಮತ್ತು ಬಿಜೆಪಿಗೆ ನಮ್ಮ ಮೇಲೆ ಬೇಕು ಬೇಕಾದಾಗ ವ್ಯಾಮೋಹ ಬರುತ್ತೆ. ನನ್ನ ಸರಕಾರ ಬೀಳಲು ಮುಖ್ಯ ಕಾರಣ- ಸುಧಾಕರ್ . ಈಗ ನನ್ನ ಭೇಟಿ ಮಾಡಲು ಕಾಯುತ್ತಿದ್ದಾರೆ. ಕುಮಾರಸ್ವಾಮಿ ನನಗೆ ಆತ್ಮೀಯರು ಎಂದು ಹೇಳುತ್ತಿದ್ದಾರೆ. ಸುಧಾಕರ್ ಇತಿಹಾಸ ನಾನು ಇಟ್ಟಿದ್ದೇನೆ.
ನನ್ನ ಬಗ್ಗೆ ಏನೆಲ್ಲ ಮಾತಾಡಿದ್ದಾನೆ ಗೊತ್ತಿದೆ. ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಒಮ್ಮೆಯೂ ಒಂದು ಪತ್ರ ಕೊಟ್ಟು ಗಮನ ಸೆಳೆದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾತ್ರ ಬಂದಿದ್ದ.
ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಯೋಗೇಶ್ವರ್ ಓಡಾಡುತ್ತಿದ್ದಾರೆ. ನನ್ನ ಬೆಂಬಲ ಬೇಕು ಎಂದು ಹಿಂದೆ ಬಿದ್ದಿದ್ದಾರೆ. ನನ್ನ ಸರ್ಕಾರ ಬೀಳಿಸಲು ಯೋಗೀಶ್ವರ್ ಓಡಾಡಿದ್ದು ಗೊತ್ತಿದೆ.
ಮಹಾಲಕ್ಷ್ಮಿ ಲೇಔಟ್ ಕೆ.ಗೋಪಾಲಯ್ಯ ಬಗ್ಗೆ ಗೊತ್ತಿದೆ. ನನಗಿಂತ ನಿಮ್ಮೆಲ್ಲರಿಗೂ ಅವರ ಬ್ಯಾಕ್ ಗ್ರೌಂಡ್ ಗೊತ್ತಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ನಾವು ಗೆಲ್ಲುತ್ತೇವೆ. ಗೋಪಾಲಯ್ಯ ಎಂತ ವ್ಯಕ್ತಿ ಅದಕ್ಕೆ ಸರಿಸಮನಾದ ವ್ಯಕ್ತಿ ನಿಲ್ಲಿಸಬೇಕು. ಇಲ್ಲವಾದರೆ ರೌಡಿಗಳಿಂದ ಹೆದರಿಸಿ ಓಡಿಸುತ್ತಾನೆ. ಪೊಲೀಸರಿಂದ ಧಮ್ಕಿ ಹಾಕುತ್ತಾನೆ. ಇಲ್ಲಿಂದ ಓಡಿಹೋದ ೧೫ ಜನರೂ ಸೋಲಬೇಕು. ಇದಕ್ಕಾಗಿ ನಾನು ರಣತಂತ್ರ ರೂಪಿಸುತ್ತೇವೆ
ಸಿದ್ದರಾಮಯ್ಯ ಮತ್ತು ನನ್ನ ಮಧ್ಯೆ ಹೋರಾಟ ಬೇರೆ, ಆದರೆ ಹದಿನೈದು ಜನರನ್ನು ಸೋಲಿಸುವುದೇ ನನ್ನ ಗುರಿ. ನಾಳೆ ಸಂಜೆ ಜೆಡಿಎಸ್ ಶಾಸಕಾಂಗ ಸಭೆ ಕರೆದಿದ್ದೇನೆ. ಸಭೆಗೆ ಶಾಸಕರು, ಪರಿಷತ್ ಸದಸ್ಯರು ಬರ್ತಾರೆ. 15 ಕ್ಷೇತ್ರಗಳಿಗೆ ಚುನಾವಣಾ ಜವಾಬ್ದಾರಿ ನೀಡ್ತೇನೆ.
ಎರಡು ಮೂರು ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಅಲ್ಲ. ಆದ್ರೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಯಾವ ಪಕ್ಷಕ್ಕೂ ಅನುಕೂಲ ಮಾಡಿಕೊಡಲು ಅಲ್ಲ. ರಾಜಕೀಯದಲ್ಲಿ ಶತ್ರುಗಳೂ ಇಲ್ಲ. ಮಿತ್ರರೂ ಇಲ್ಲ. ಇವತ್ತಿನ ರಾಜಕೀಯ ಸಂದರ್ಭದಲ್ಲಿ ಮತ್ತು ಮುಂದಿನ ನಮ್ಮ ಪಕ್ಷದ ಹಿತ ದೃಷ್ಟಿಯಿಂದ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಅವರಿಗೆ ಘೋಷಣೆ ಮಾಡಿದ್ದೇನೆ ಅಷ್ಟೇ. ಇದಕ್ಕೆ ವಿಶೇಷ ಅರ್ಥ ಬೇಕಿಲ್ಲ. ಅವರು ಪ್ರಚಾರಕ್ಕೆ ಕರೆದರೆ, ಒಂದು ದಿನ ಹೋಗಿ ಬರುತ್ತೇನೆ. ಅವನೊಂದಿಗೆ ಸಂಪರ್ಕದಲ್ಲಿ ಇದ್ದೇನೆ
ರಾಜಕಾರಣ ಎಂದರೆ ತಂತ್ರ ಮಾಡಲೇಬೇಕು. ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಯುದ್ದ ಎಂದ್ರೆ ಸಂಸಾರ, ಸ್ನೇಹಿತರು ಯಾರನ್ನೂ ನೋಡುವಂತಿಲ್ಲ
—
key words : bangalore-election-kumaraswamy-jds