ಬೆಂಗಳೂರು,ಅ,25,2019(www.justkannada.in): ಜೆಡಿಎಸ್ ಕಾರ್ಯಕರ್ತನ ಬಾಯಿಗೆ ರಿವಾಲ್ವರ್ ಇಟ್ಟು ಸ್ಟೇಶನ್ ಗೆ ಕರೆದುಕೊಂಡು ಹೋಗಿ ಅಮಾನುಷವಾಗಿ ಹೊಡೆದಿದ್ದಾರೆ. ಹೀಗಾಗಿ ಯಾದಗಿರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಮಾನತು ಮಾಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಆಗ್ರಹಿಸಿದರು.
ಜೆ.ಪಿ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಯಾದಗಿರಿಯಲ್ಲಿ ಜೆಡಿಎಸ್ ಯುವ ಕಾರ್ಯಕರ್ತರ ಮೇಲೆ ಪೊಲೀಸ್ ದರ್ಪ ವಿಚಾರ, ಸಿಎಂ ಪಾಸ್ ಆಗುವಾಗ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ್ರು. ಸಿಎಂ ಕಾರು ಡ್ಯಾಮೇಜ್ ಮಾಡಿಲ್ಲ. ಅಥವಾ ಸಿಎಂಗೆ ಅವಮಾನ ಮಾಡಿಲ್ಲ. ಕುಮಾರಸ್ವಾಮಿ ನೀಡಿದ್ದ ಅನುದಾನ ವಿತ್ ಡ್ರಾ ಮಾಡಿ ಸಿಎಂ ರಾಜಕೀಯ ದ್ವೇಷ ಸಾಧಿಸಿದ್ರು. ಈ ವಿಚಾರದ ಬಗ್ಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು. ಅವತ್ತು ರಾತ್ರಿಯೇ ನಮ್ಮ ಕಾರ್ಯಕರ್ತರ ಮೇಲೆ ಎಫ್ ಐ ಆರ್ ಹಾಕಿದರು. ಅಷ್ಟೇ ಅಲ್ಲದೆ ಇಬ್ಬರು ಕಾನ್ಸ್ ಟೇಬಲ್, ಹಾಗೂ ಸಬ್ ಇನ್ಸ್ ಪೆಕ್ಟರ್ ಕಾರ್ಯಕರ್ತನನ್ನು ಹೊರಗೆ ತಂದು ಹೊಡೆದಿದ್ದಾರೆ. ಜತೆಗೆ ಜೆಡಿಎಸ್ ಕಾರ್ಯಕರ್ತನ ಬಾಯಿಗೆ ರಿವಾಲ್ವರ್ ಇಟ್ಟಿದ್ದಾರೆ. ಸ್ಟೇಶನ್ ಗೆ ಕರೆದುಕೊಂಡು ಬೆಲ್ಟ್ ನಿಂದ ಹೊಡೆದು ಹಿಂಸೆ ಕೊಟ್ಟಿದ್ದಾರೆ. ಹೀಗಾಗಿ ನನ್ನ ಮನಸ್ಸಿನ ಭಾವನೆ, ನೋವು ಅರ್ಥ ಮಾಡಿಕೊಂಡು ಅಮಾನತಿನಲ್ಲಿಡಬೇಕು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನನ್ನು ಅಮಾನತಿನಲ್ಲಿಡಲೇಬೇಕು ಅಂತ ಒತ್ತಾಯಿಸುತ್ತೀನಿ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಟ್ವಿಟರ್ ನಲ್ಲಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಡಿ, ಕುಮಾರಸ್ವಾಮಿ ವಾಸ್ತವಾಂಶ ಹೇಳಿದ್ದಾರೆ. ಸರ್ಕಾರ ಬೀಳುವುದಕ್ಕೆ ಏನಾಯ್ತು ಎಂದು ಗೊತ್ತು. ಬಿಜೆಪಿ ಜೊತೆ ಹೋದವರ ಬಗ್ಗೆಯೂ ಗೊತ್ತು. ಸಿದ್ದರಾಮಯ್ಯ ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದರು ಅವರು ಹಾಗೆಯೇ ಪ್ರಚಾರ ಮಾಡಿದ್ದರು. ಆದರೆ ಸಿದ್ದರಾಮಯ್ಯ ಬಾದಾಮಿಗೆ ಹೋಗಿ ಗೆಲ್ಲಬೇಕಾಯ್ತು. ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದರು. ಆ ಕಾರಣದಿಂದ ಸರ್ಕಾರ ರಚನೆಗೆ ಒಪ್ಪಿದ್ದರು. ಅವರೇ ಮನೆಗೆ ಬಂದು ಮನವಿ ಮಾಡಿದರು. ಕೊನೆಗೆ ನಮಗೆ ಶಿಕ್ಷೆ ನೀಡಿದರು ಎಂದು ಕಿಡಿಕಾರಿದರು.
ಹಾಗೆಯೇ ಅವರು ಧರ್ಮಸ್ಥಳದಲ್ಲಿ ಹೋಗಿ ಯಾರ್ಯಾರ ಜೊತೆ ಏನು ಮಾತಾಡಿದ್ರು ಅಂತನೂ ಗೊತ್ತು ಅಲ್ಲಿಂದ ಬಂದ ನಂತರ ಏನ್ ಮಾಡಿದ್ರು ಅದು ಗೊತ್ತು ಮುಂದೇನಾಯಿತು ರಾಜ್ಯದ ಜನತೆಗೂ ಗೊತ್ತು ಎಂದರು.
ಹಾಲು ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ಈ ಬಗ್ಗೆ ನಾನು ಹೋರಾಟ ಮಾಡ್ತೀನಿ. ನಾನು ರೈತನ ಮಗ. ರೇವಣ್ಣ ಕೆಎಂಎಫ್ ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಡಿದ್ದಾರೆ. ಲಾಸ್ ನಲ್ಲಿ ಇದ್ದ ಸಂಸ್ಥೆಯನ್ನ 4 ಸಾವಿರ ಕೋಟಿ ಲಾಭಕ್ಕೆ ರೇವಣ್ಣ ತಂದ್ರು. ಸೂಪರ್ ಮಾರ್ಕೆಟ್ ಮಾಡಿದ್ರು. ರೇವಣ್ಣ ರನ್ನ ಮಿಲ್ಕ್ ಮ್ಯಾನ್ ಅಂತ ಕರೆದ್ರು. ಹಾಲನ್ನ ಈಗ ಆಮದು ಮಾಡಿಕೊಳ್ತೀನಿ ಅಂದ್ರೆ ರೈತರಿಗೆ ತೊಂದರೆ ಆಗುತ್ತೆ ಇದ್ರ ವಿರುದ್ದ ನಾನು ತೀವ್ರ ಹೋರಾಟ ಮಾಡ್ತೀನಿ.. ಎಂದು ಹೆಚ್.ಡಿಡಿ ಎಚ್ಚರಿಕೆ ನೀಡಿದರು.
Key words: Bangalore-hd devegowda-psi-suspend