ಬೆಂಗಳೂರು, ಫೆಬ್ರವರಿ 07, 2020 (www.justkannada.in): ಬೆಂಗಳೂರು ಇಂಟರ್ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ (ಬಿಐಎಸ್ಎಫ್ಎಫ್)ಗೆ ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಕ್ವಾಲಿಫೈಯಿಂಗ್ ಫೆಸ್ಟಿವಲ್ ಫಾರ್ ದಿ ಶಾರ್ಟ್ ಫಿಲ್ಮ್ ಅವಾರ್ಡ್ಸ್ ಮಾನ್ಯತೆ ಸಿಕ್ಕಿದೆ.
ಯುವ ಮತ್ತು ಹವ್ಯಾಸಿ ಚಿತ್ರ ನಿರ್ಮಾಪಕರಿಗೆ ತಮ್ಮ ಶಾರ್ಟ್ ಫಿಲ್ಮ್ ಗಳನ್ನು ತಯಾರಿಸಿ ಪ್ರದರ್ಶಿಸಲು ಬಿಐಎಸ್ಎಫ್ಎಫ್ ಒಂದು ವೇದಿಕೆಯನ್ನು ಕಲ್ಪಿಸುತ್ತಿದೆ. ಇದರ ಮೂಲಕ ಈ ಕ್ಷೇತ್ರದಲ್ಲಿ ಖ್ಯಾತನಾಮರಾಗಿರುವವರಿಂದ ರಚನಾತ್ಮಕವಾದ ವಿಮರ್ಶೆ ಲಭ್ಯವಾಗುವಂತೆ ಮಾಡುತ್ತದೆ.
ಫೆಸ್ಟಿವಲ್ ನ ಮೊದಲ ಸರಣಿಯಲ್ಲಿ ಕೇವಲ 40 ಶಾರ್ಟ್ ಫಿಲ್ಮ್ ಗಳನ್ನ ಪ್ರದರ್ಶಿಸಲಾಗಿತ್ತು. 2019 ರಲ್ಲಿ ಭಾರತ ಮತ್ತು ವಿದೇಶಗಳಿಂದ 3500 ಕ್ಕೂ ಹೆಚ್ಚು ಶಾರ್ಟ್ ಫಿಲ್ಮ್ ಗಳು ಬಂದಿದ್ದವು.
ಬಿಐಎಸ್ಎಫ್ಎಫ್ ಗೆ ಆಸ್ಕರ್ ಅಕಾಡೆಮಿ ಮಾನ್ಯತೆ ಎಂದರೇನು?
2020 ರಲ್ಲಿ ಬಿಐಎಸ್ಎಫ್ಎಫ್ ಅಂತಾರಾಷ್ಟ್ರೀಯ ಮತ್ತು ಭಾರತೀಯ ಸ್ಪರ್ಧಾ ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿಗಳಿಗೆ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ಕೆಟಗರಿಗೆ ಆಯ್ಕೆ ಮಾಡಲಾಗುತ್ತದೆ. ಅಕಾಡೆಮಿಯ ನಿಯಮಗಳನುಸಾರ ಈ ಆಯ್ಕೆ ನಡೆಯಲಿದೆ. ನಿರ್ದೇಶಕ, ನಟ ಮತ್ತು ಬಿಐಎಸ್ಎಫ್ಎಫ್ ಮೆಂಟರ್ ಆಗಿರುವ ಪ್ರಕಾಶ್ ಬೆಳವಾಡಿ ಅವರು ಈ ಪ್ರತಿಷ್ಠಿತ ಮಾನ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ/