ಬೆಂಗಳೂರು,ಜು,1,2020(www.justkannada.in): ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ. ಕಾಂಗ್ರೆಸ್ ನಿಂದಲೇ ದೇಶದ ಬದಲಾವಣೆಯಾಗಲಿದೆ. ರಾಜ್ಯದಲ್ಲಿ ಬಿಜೆಪಿ ಮುಕ್ತ ಮಾಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದರು.
ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಪ್ರತಿಜ್ಞೆ ಸ್ವೀಕರಿಸುವುದರ ಜತೆಗೆ ಕಾಂಗ್ರೆಸ್ ನಾಯಕರಿಗೆ ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಪ್ರತಿಜ್ಞೆ ಬೋಧಿಸಿದರು.
ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರು ಗಟ್ಟಿಯಾಗಿದ್ದರೇ ಕಾಂಗ್ರೆಸ್ ಗಟ್ಟಿಯಾಗಿರುತ್ತದೆ. ಕಾರ್ಯಕರ್ತರು ವೀಕ್ ಆಗಿದ್ದರೇ ಪಕ್ಷ ವೀಕ್ ಆಗುತ್ತೆ. ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ. ಕಾಂಗ್ರೆಸ್ ನಿಂದಲೇ ದೇಶದ ಬದಲಾವಣೆ.ಕೇಂದ್ರ ಸರ್ಕಾರ ನೀಡಿದ್ದ ಹಣ ಜನರಿಗೆ ತಲುಪಿಲ್ಲ. ಕೇಂದ್ರದ ಅನುದಾನದಿಂದ ಏನು ಪ್ರಯೋಜನವಿಲ್ಲ. ಬಿಜೆಪಿ ಮುಕ್ತ ರಾಜ್ಯ ಮಾಡೋಣ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…..
ಎಲ್ಲರ ಆಶೀರ್ವಾದವೂ ನನಗೆ ಬೇಕಿದೆ. ನನ್ನ ಪಾಲಿಗೆ ಇದೋಂದು ಐತಿಹಾಸಿಕ ದಿನ. ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಪಕ್ಷದ ನಾಯಕರು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹಂಬಲವೂ ಇರಲಿಲ್ಲ. ಇನ್ನಾವುದೋ ಅಧಿಕಾರದ ಆಸೆಯೂ ಇರಲಿಲ್ಲ.
ನನ್ನಮುಂದೆ ದೊಡ್ಡ ಜವಾಬ್ದಾರಿ ಇದೆ. ಡಿಕೆಶಿ ಕುಟುಂಬ ಏನು ತಪ್ಪು ಮಾಡದಿದ್ದರೂ ಜೈಲಿಗೆ ಕಳೂಹಿಸಿದ್ರು. ನನ್ನನ್ನ ತಿಹಾರ್ ಜೈಲಿಗೆ ಕಳುಹಿಸಿದ್ದರು. ಆಗ ಸೋನಿಯಾ ಗಾಂಧಿ ಅವರುನನ್ನನ್ನ ಭೇಟಿ ಮಾಡಿ ಒಂದು ಗಂಟೆಗಳ ಕಾಲ ಚರ್ಚಿಸಿದ್ದರು. ಆ ವೇಳೆ ನನಗೆ ಕೆಪಿಸಿಸಿ ಜವಾಬ್ದಾರಿ ನೀಡುವುದಾಗಿ ಹೇಳಿದ್ದರು. ಅಂತೆಯೇ ಈಗ ಜವಾಬ್ದಾರಿ ನೀಡಿದ್ದಾರೆ. ಸೋನಿಯಾ ಗಾಂಧಿಗೆ ನಾನು ಎಂದೆಂದಿಗೂ ಚಿರಋಣಿ. ನಾವೆಲ್ಲರೂ ಸೇರಿ ಪಕ್ಷ ಕಟ್ಟಬೇಕಿದೆ.
ನನಗೆ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ಸವಾಲನ್ನು ಎದುರಿಸುವ ಬಲ ಇದೆ. ನನಗೆ ವೈಯಕ್ತಿಕ ನಾಯಕತ್ವದ ಮೇಲೆ ನಂಬಿಕೆ ಇಲ್ಲ. ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇದೆ. ನಾನು ಮೊದಲು ಕಾರ್ಯಕರ್ತ. ಆ ಮೇಲೆ ಈ ಸ್ಥಾನ. ನಾನು ನುಡಿದಂತೆ ನಡೆದಿದ್ದೇನೆ. ನಾನು ಯಾವುದೇ ವೈಯಕ್ತಿಕ ತೀರ್ಮಾನ ಮಾಡುವುದಿಲ್ಲ. ನನೆಗೆ ಕಾಂಗ್ರೆಸ್ ಧರ್ಮ, ಕಾಂಗ್ರೆಸ್ ಜಾತಿ. ಕಾಂಗ್ರೆಸ್ ಗುಂಪಿನ ಮೇಳೆ ಮಾತ್ರ ನಂಬಿಕೆ ಇದೆ. ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ. ನನಗೆ ಹಿಂಬಾಲಕರು ಬೇಡ.
ಯಾರು ಎಷ್ಠೆ ತೊಂದರೇ ಕೊಟ್ಟರು ಆಮಿಷ ಕೊಟ್ಟರೂ ಜೈಲಿಗೆ ಹಾಕಿಸಿದರೂ ಯಾವುದಕ್ಕೂ ನಾನು ಜಗ್ಗುವುದಿಲ್ಲ. ನನ್ನನ್ನ ಕನಕಪುರ ಬಂಡೆ ಎನ್ನುತ್ತಾರೆ. ನಾನು ಬಂಡೆಯಾಗುವುದಕ್ಕೆ ಇಷ್ಟಪಡುವುದಿಲ್ಲ. ನಾನು ವಿಧಾನಸೌಧದ ಮೆಟ್ಟಲಿನ ಚಪ್ಪಡಿಯಾದರೇ ಸಾಕು.
ಕಾಂಗ್ರೆಸ್ ನಿಂದ ಕೆಲವರು ಹೋದರು. ಹೋಗುವವರು ಇದ್ದರೇ ಹೋಗಲಿ. ಅದಕ್ಕೆ ಕಾಂಗ್ರೆಸ್ ಪಕ್ಷ ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರು ಗಟ್ಟಿಯಾಗಿದ್ದರೇ ಕಾಂಗ್ರೆಸ್ ಗಟ್ಟಿಯಾಗಿರುತ್ತೆ. ಕಾಂಗ್ರೆಸ್ ವೀಕ್ ಆಗಿದ್ದರೇ ಪಕ್ಷ ವೀಕ್ ಆಗುತ್ತೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: Bangalore- KPCC-president-DK Shivakumar-congress activitist