ಬೆಂಗಳೂರು, ಮೇ 30, 2021: (www.justkannada.in news ) ಬಲೂನ್ ವ್ಯಾಪಾರ ಮಾಡುತ್ತಾ ವಿಜಯನಗರ ಟೋಲ್‌ಗೇಟ್ ಮೆಟ್ರೋ ಕೆಳಗೆ ಟೆಂಟ್‌ಗಳಲ್ಲಿ ಜೀವನ ಸಾಗಿಸುತ್ತಿದ್ದ 15 ಬಡ ಕುಟುಂಬಗಳನ್ನು ಪೊಲೀಸರು ನಿನ್ನೆ ರಾತ್ರಿ ಅಲ್ಲಿಂದ ಎತ್ತಂಗಡಿ ಮಾಡಿಸಿದ್ದಾರೆ.
ದಿಕ್ಕು ಕಾಣದ ಆ ವಲಸೆ ಕಾರ್ಮಿಕ ಕುಟುಂಬಗಳು ಸದ್ಯ ಕಾರ್ಡ್ ರೋಡ್‌ನಲ್ಲಿರುವ ದೋಬಿ ಘಾಟ್ ಸಿಗ್ನಲ್‌ನಲ್ಲಿರುವ ಫ್ಲೈ ಓವರ್ ಕೆಳಗೆ ಆಶ್ರಯ ಪಡೆದಿದ್ದಾರೆ. ಆದರೆ ಬಿಬಿಎಂಪಿಯ ಅಧಿಕಾರಿಗಳು ಈಗ ಅಲ್ಲಿಂದಲೂ ಎತ್ತಂಗಡಿ ಮಾಡಿಸಲು ಮುಂದಾಗಿದ್ದಾರೆ. ಎಲ್ಲಾದರೂ ಹೋಗಿ 15 ದಿನ ಈ ಕಡೆ ಕಾಣಿಸಿಕೊಳ್ಳಬೇಡಿ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.
ಈ ಲಾಕ್‌ಡೌನ್, ಕೊರೊನಾ ಹರಡುವ ಭಯದ ಸಂದರ್ಭದಲ್ಲಿ ಈ ಬಡಕುಟುಂಬಗಳು ಎಲ್ಲಿಗೆ ಹೋಗಲು ಸಾಧ್ಯ? ಅವರು ಮಾಡಿದ ಅಪರಾಧವಾದರೂ ಏನು? ಅವರಿಗೆ ಯಾಕೆ ಈ ಶಿಕ್ಷೆ? ಎಂಬುದು ಪ್ರಶ್ನೆ.
ದಯವಿಟ್ಟು ಪೊಲೀಸರು ಮತ್ತು ಬಿಬಿಎಂಪಿಯವರು ಈ ಬಡಜನರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಮಾನವೀಯತೆಯ ದೃಷ್ಟಿಯಿಂದ ಆ ಜನರಿಗೆ ಕೂಡಲೇ ಸರ್ಕಾರದ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು.. ಮಳೆ ಗಾಳಿಯಿಂದ ರಕ್ಷಿಸಬೇಕು. ಆಹಾರದ ಕಿಟ್‌ಗಳನ್ನು ಕೊಡಬೇಕು.
key words : bangalore-lock.down-nomadic-tribe-toll-gate