ಎಂಎಸ್‌ಎಂಇ ಅಭಿವೃದ್ಧಿಗೆ ರಾಜ್ಯಸರ್ಕಾರ ಬದ್ಧ ; ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ್‌

State government committed to MSME development; Small Industries Minister Sharanabasappa Darshanapur

ಬೆಂಗಳೂರು, ಏ.03,2025:  ದೇಶದಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಎಂಎಸ್‌ಎಂಇ ಬಹುಮುಖ್ಯ ಪಾತ್ರವಹಿಸಿದೆ. ಉದ್ಯೋಗಾವಕಾಶವಾಗಿರಲಿ ಅಥವಾ ವಿವಿಧ ವಲಯಗಳಲ್ಲಿ ಎಂಎಸ್‌ಎಂಇಯು ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. ಎಫ್‌ಕೆಸಿಸಿಐ, ಕಾಸಿಯಾ, ಮತ್ತು ಪಿಐಎ ಈ ಮೂರೂ ಸಂಸ್ಥೆಗಳು ಒಟ್ಟಾಗಿ ಸೇರಿ ಆಯೋಜಿಸುತ್ತಿರುವ ಇಂಡಿಯಾ ಎಂಎಸ್‌ಎಂಇ ಕಾನ್‌ಕ್ಲೇವ್‌ 2025  ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಸಂಪೂರ್ಣ  ಸಹಕಾರ ನೀಡುತ್ತದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ್  ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಪೀಣ್ಯ ಕೈಗಾರಿಕಾ ಸಂಘ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಇಂಡಿಯಾ ಎಂಎಸ್‌ಎಂಇ ಕಾನ್‌ಕ್ಲೇವ್‌ 2025 ರ ಲೋಗೋ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.

ಎಂಎಸ್‌ಎಂಇ ಗಳಿಗೆ ರಾಜ್ಯ ಸರ್ಕಾರವಾಗಲೀ,  ಕೇಂದ್ರ ಸರ್ಕಾರವಾಗಲೀ ಹೆಚ್ಚಿನ ಶಕ್ತಿ ತುಂಬಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷವಾಗಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಹಲವಾರು ತೊಂದರೆ ಅನುಭವಿಸುತ್ತಿದ್ದು, ರಾಜ್ಯದಲ್ಲಿ ಎಂಎಸ್‌ಎಂಇ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆಸಕ್ತಿ ವಹಿಸಿದೆ. ಎಂಎಸ್‌ಎಂಇಯ ಹೆಚ್ಚಿನ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಮತ್ತು ಹಾಗೂ ಪರಿಹಾರ ನೀಡಬೇಕಾಗಿದೆ ಎಂದರು.

ರಾಜ್ಯ ಸರ್ಕಾರದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ. ಅದರಲ್ಲೂ ವಿಶೇಷವಾಗಿ ಪೀಣ್ಯ ಪ್ರದೇಶದಲ್ಲಿ ಹಾಗೂ ಇನ್ನೂ ಹಲವಾರು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐನ ಅಧ್ಯಕ್ಷ ಎಂ.ಜಿ, ಬಾಲಕೃಷ್ಣ  ಮಾತನಾಡಿ, ಮೂರು ಸಂಸ್ಥೆಗಳು ಆಯೋಜಿಸುತ್ತಿರುವ ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವು ಸಹಕಾರ ನೀಡಬೇಕು ಎಂದರು. ಜತೆಗೆ ಸಚಿವರ ಮುಖೇನ ಕೇಂದ್ರ ಸರ್ಕಾರದ ಸಹಕಾರಕ್ಕೂ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಂ.ಜಿ. ರಾಜಗೋಪಾಲ್‌, ಅಧ್ಯಕ್ಷರು, ಕಾಸಿಯಾ, ಶಿವಕುಮಾರ್‌ ಆರ್‌, ಅಧ್ಯಕ್ಷರು, ಪಿಐಎ ಹಾಗೂ ಮೂರೂ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು

key words: Bangalore, MSME, Small Industries Minister, Sharanabasappa Darshanapur

SUMMARY: 

State government committed to MSME development; Small Industries Minister Sharanabasappa Darshanapur. Logo unveiling ceremony of India MSME Conclave 2025.