ಬೆಂಗಳೂರು, ಜ.೨೪,೨೦೨೫ : ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳುವುದಕ್ಕೆ ನಿಯಂತ್ರಿಸಲು ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ರಾಜ್ಯ ಸಚಿವ ಸಫುಟ ಸಭೆಯಲ್ಲಿ ನಿರ್ಣಯ.
ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಮಾಧ್ಯಮಗಳಿಗೆ ಹೇಳಿಕೆ.
ಕಳೆದ ೧೯೯೬ರಲ್ಲಿ ಅರಮನೆಯನ್ನ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕಾನೂನು ಮಾಡಲಾಗಿತ್ತು. ಅದನ್ನ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಲಾಗಿತ್ತು. ಅದು ಅಂಗೀಕಾರವೂ ಆಗಿತ್ತು. ೪೭೨ ಎಕರೆ ಭೂಮಿಯನ್ನ ಅಂದಿನ ಮಾರುಕಟ್ಟೆ ೧೧ ಕೋಟಿ ಮೌಲ್ಯ ನಿರ್ಧರಿಸಲಾಗಿತ್ತು.
೧೯೯೬ರ ಭೂಸ್ವಾಧೀನ ಕಾನೂನನ್ನ ಮೈಸೂರು ಮಹಾರಾಜರು ಪ್ರಶ್ನೆ ಮಾಡಿದ್ರು. ಅದನ್ನ ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಸುಪ್ರೀಂಕೋರ್ಟ್ ಗೆ ಸಿವಿಲ್ ಅಪೀಲ್ ಹೋಗಿದ್ರು ಎಂದು ಮಾಹಿತಿ ನೀಡಿದ ಸಚಿವ ಪಾಟೀಲ್.
ಟಿಡಿಆರ್ ವ್ಯವಸ್ಥೆ ಬಂದ ಬಳಿಕ ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ ಅಗಲೀಕಣ ವೇಳೆ ಮತ್ತೆ ಪ್ರಕರಣ ಚರ್ಚೆಗೆ ಬರುತ್ತೆ. ಪ್ರತೀ ಎಕರೆಗೆ ೨.೩೦ ಲಕ್ಷ ಪರಿಹಾರ ಕೊಡಬೇಕು ಅಂತಾ ಆಗುತ್ತೆ. ಇಷ್ಟು ವರ್ಷ ವ್ಯಾಜ್ಯ ನಡೀತಿದ್ರೂ ತಡೆ ಆದೇಶ ಇಲ್ಲ.
೨೦೦೪ರಲ್ಲಿ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಅಧಿಕಾರಿಗಳ ಮೇಲೆ ಹೂಡಲಾಗುತ್ತದೆ. ಅರಮನೆ ಮೈದಾನವನ್ನ ಅಗಲೀಕರಣ ಉದ್ದೇಶಕ್ಕೆ ಮೌಲ್ಯೀಕರಿಸಿ ವರ್ಗಾವಣೆ ಮಾಡಲು ಕೋರ್ಟ್ ಆದೇಶ ಮಾಡುತ್ತದೆ.
೧೫.೩೬ ಎಕರೆ ಭೂಮಿ, ಪ್ರತೀ ಎಕರೆಗೆ ೨೦೦ ಕೋಟಿಯಂತೆ ೩೦೧೪ ಕೋಟಿ ಕೊಡಬೇಕಾಗುತ್ತೆ. ಎರಡು ಲಕ್ಷ ಮುವತ್ತು ಸಾವಿರ ಎಲ್ಲಿ ೩೦೧೪ ಕೋಟಿ ಎಲ್ಲಿ..? ಇದಿರಂದ ಅಭಿವೃದ್ದಿಗೆ ಗಂಡಾಂತರ ಆಗಲಿದೆ. ಪ್ರಗತಿಗೆ ವಿರೋಧ ನೀತಿ ಆಗುತ್ತೆ. ಸಚಿವ ಹೆಚ್.ಕೆ.ಪಾಟೀಲ್ ಹೇಳಿಕೆ.
ಬೆಂಗಳೂರು ಅರಮನೆ ರಸ್ತೆ ಅಗಲೀಕರಣ ಯೋಜನೆ. ಟಿಡಿಆರ್ ವಿಸ್ತರಣೆಗೆ ಸಂಪುಟ ನಕಾರ. ವಾರಸುದಾರರಿಗೆ ಟಿಡಿಆರ್ ನೀಡದಿರಲು ನಿರ್ಧರಿಸಲಾಗಿದೆ. ಸಚಿವರ ಹೇಳಿಕೆ.
KEY WORDS: BANGALORE, Ordinance, prohibiting, use of land, bangalore palace grounds, Resolution.
SUMMARY.
BANGALORE: Ordinance prohibiting the use of land in palace grounds; State Government Resolution.
A resolution on promulgation of an ordinance to regulate the use of land at The Palace Grounds in Bengaluru was taken at a meeting of State Minister Law and Parliamentary Affairs Minister H K Patil told the media after the cabinet meeting.